ಬಾಗಲಕೋಟೆ : ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ 5 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಅವರು ಸಿದ್ದರಾಮಯ್ಯ ಅಲ್ಲ ಸುಳ್ಳುರಾಮಯ್ಯ ಎಂದು ಸಿಎಂ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ವರದಿಗಾರರೊಂದಿಗೆ ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಸಿಎಂ 5 ಲಕ್ಷ 55 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಕಾಂಗ್ರೆಸ್ ನ ಎಲ್ಲ ಗುಣಗಳನ್ನು ಸಿದ್ದರಾಮಯ್ಯ ಅಳವಡಿಸಿಕೊಂಡಿದ್ದಾರೆ. ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ಕೇಂದ್ರ ಸರ್ಕಾರದ ವಿರುದ್ಧ ರಾಯರೆಡ್ಡಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ರಾಯರೆಡ್ಡಿ ಅವರಿಗೆ ಆವಾಗಾವಾಗ ಜಾಣಮರವು ಆಗುತ್ತೆ. ಎತ್ತಿನಹೊಳೆ ಯೋಜನೆಗೆ ಮಹದಾಯಿ ಅರಣ್ಯ ಕ್ಲೀಯರೆನ್ಸ್ ಆಗಿದೆ. ಗೋವಾದವರು ವೈಲ್ಡ್‌ಲೈಫ್ ಸಲುವಾಗಿ ಕೋರ್ಟ್‌ಗೆ ಹೋಗಿದ್ದಾರೆ. ಅದಕ್ಕೆ ರಾಜ್ಯ ಸರ್ಕಾರದವರು ಸರಿಯಾಗಿ ವಾದ ಮಾಡಿ ಕ್ಲೀಯರ್ ಮಾಡಿಸಬೇಕು. ಸರ್ಕಾರದಲ್ಲಿ ಇರುವವರು ಯುಕೆಪಿ ಬಗ್ಗೆ ಮಾತನಾಡುವುದಿಲ್ಲ ಡಿಪಿಆರ್ ಮಾಡಲು 14 ವರ್ಷ ತೆಗೆದುಕೊಳ್ಳಲಾಯಿತು ಎಂದಿದ್ದಾರೆ.
ಇಡೀ ಯುಕೆಪಿ ಕಾಸ್ಟ್ ಹೆಚ್ಚಾಗಲು ಕಾಂಗ್ರೆಸ್ ಕಾರಣ. ಕಾಂಗ್ರೆಸ್ ಸರ್ಕಾರ ಇದ್ದಾಗ ಎ ಸ್ಕೀಂ, ಬಿ ಸ್ಕೀಂ ಅಂತ ಇದ್ದವು. ಬೇರೆ ರಾಜ್ಯದಲ್ಲಿ ಇರಲಾರ ಬಿ ಸ್ಕೀಂ ನಮ್ಮ ರಾಜ್ಯದಲ್ಲಿ ಏಕೆ ಎಂದು ಎಲ್ಲ ಕಾಮಗಾರಿ ಆರಂಭಿಸಿದೆ. ಅದು ಹೆಚ್ಚು ಕೊಡುಗೆ ಇರುವುದು ಬಿಜೆಪಿ ಸರ್ಕಾರದ್ದು ಎಂದು ಬೊಮ್ಮಾಯಿ ಹೇಳಿದ್ದಾರೆ.



















