ಭಾರತ ಟೆಸ್ಟ್ ಕ್ರಿಕೆಟ್ ನಲ್ಲಿ ನೂತನ ಯುಗ ಆರಂಭವಾಗಿದೆ. ರೋಹಿತ್ ಶರ್ಮಾರಿಂದ ತೆರವಾಗಿದ್ದ ನಾಯಕತ್ವದ ಹೊಣೆಯನ್ನು ಇದೀಗ ಶುಭಮನ್ ಗಿಲ್ ಹೆಗಲಿಗೇರಿಸಲಾಗಿದೆ.
ಇನ್ನು ರಿಷಬ್ ಪಂತ್ ಗೆ ಉಪನಾಯಕತ್ವ ನೀಡಲಾಗಿದೆ. ಉಳಿದಂತೆ 7 ವರ್ಷಗಳ ಬಳಿಕ ಕರಣ್ ನಾಯರ್ ಗೆ ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಲಭಿಸಿದೆ. ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ರವೀಂದ್ರ ಜಡೇಜಾ,ಧ್ರುವ್ ಜುರೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್,ಜಸ್ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಕೆಎಲ್ ರಾಹುಲ್, ನಿತೀಶ್ ಕುಮಾರ್ ರೆಡ್ಡಿ ಸೇರಿ ಒಟ್ಟು 18 ಆಟಗಾರರ ತಂಡವನ್ನು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಅಂತಿಮಗೊಳಿಸಿದೆ.