ಇಸ್ಲಾಮಾಬಾದ್ : ಸುಮಾರು 1,200 ಮಳಿಗೆಗಳನ್ನು ಹೊಂದಿದ್ದ ಕರಾಚಿಯ ಗುಲ್ ಪ್ಲಾಜಾ ಶಾಪಿಂಗ್ ಮಾಲ್‌ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ 14 ಮಂದಿ ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಫುಲ್ಬಾಲ್ ಮೈದಾನಕ್ಕಿಂತಲೂ ಹೆಚ್ಚಿನ ವಿಸ್ತೀರ್ಣ ಹೊಂದಿರುವ ಮಾಲ್‌ನ ಬಹುತೇಕ ಭಾಗಗಳು ಸುಟ್ಟುಹೋಗಿದೆ. ಹೀಗಾಗಿ ಕಟ್ಟಡ ಯಾವುದೇ ಕ್ಷಣದಲ್ಲೂ ಕುಸಿದು ಬೀಳುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.
ದುರಂತದಲ್ಲಿ 60ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದು, ಸುಮಾರು 70 ಜನ ಕಟ್ಟಡದಲ್ಲೇ ಸಿಲುಕಿದ್ದಾರೆ ಎನ್ನಲಾಗಿದೆ. ಶಾಪಿಂಗ್ ಮಾಲ್‌ನ ಮತ್ತೊಂದು ಬದಿಯು ಬೆಂಕಿಯ ಕೆನ್ನಾಲಿಗೆಗೆ ಸುಟ್ಟುಹೋಗಿದ್ದು, ಯಾವುದೇ ಕ್ಷಣದಲ್ಲೂ ಕುಸಿಯುವ ಸಾಧ್ಯತೆಯಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ. ಮಾಲ್ ಕಳೆದುಕೊಂಡ ಮಾಲೀಕರು ಕಣ್ಣೀರಿಟ್ಟಿದ್ದಾರೆ, 20 ವರ್ಷಗಳ ಕಠಿಣ ಪರಿಶ್ರಮ ಎಲ್ಲವೂ ವ್ಯರ್ಥವಾಗಿದೆ ಎಂದು ಗೋಳಾಡಿದ್ದಾರೆ.
ಇನ್ನೂ ಪೊಲೀಸ್ ಮುಖ್ಯಸ್ಥರಾದ ಜಾವೇದ್ ಆಲಂ ಓಧೋ ಮಾತಮಾಡಿ, ಈವರೆಗೆ 14 ಮಂದಿ ಸಾವನ್ನಪ್ಪಿದ್ದಾರೆ, ಗಾಯಗೊಂಡಿದ್ದ 18 ಜನರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ತಂಡಗಳು ಇನ್ನೂ ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ADGP ರಾಮಚಂದ್ರರಾವ್ ರಾಸಲೀಲೆ ವಿಡಿಯೋ ಪ್ರಕರಣ | ಅಧಿಕಾರಿ ವಿರುದ್ದ ಕೂಡಲೇ ಕ್ರಮಕ್ಕೆ ದಿನೇಶ್ ಕಲ್ಲಹಳ್ಳಿ ಆಗ್ರಹ!



















