ಬೆಂಗಳೂರು : ಬೆಂಗಳೂರಲ್ಲಿ ಶೂ ಕಳ್ಳರ ಹಾವಳಿ ಹೆಚ್ಚಾಗಿದೆ. ಮನೆಯ ಕಾಂಪೌಂಡ್ ಹಾರಿ ಬ್ರ್ಯಾಂಡೆಡ್ ಶೂ, ಚಪ್ಪಲಿಯನ್ನು ಮಾತ್ರ ಕದ್ದಿರುವ ಘಟನೆ ಬೆಂಗಳೂರಿನ ಹೊರ ವಲಯದಲ್ಲಿ ನಡೆದಿದೆ.
ಮಂಕಿ ಕ್ಯಾಪು ಹಾಕ್ಕೊಂಡು ಕಂಪೌಂಡ್ ಎಗರಿ ಕಳ್ಳತನ ಮಾಡುತ್ತಾರೆ. ಕೆಂಗೇರಿ,ಮಾದನಾಯಕನಹಳ್ಳಿ, ಸುಬ್ರಮಣ್ಯಪುರ, ಕುಂಬಳಗೋಡು, ಜ್ಞಾನ ಭಾರತಿ, ಅನ್ನಪೂರ್ಣೇಶ್ವರಿ ನಗರ ಸೇರಿದಂತೆ ಹಲವೆಡೆ ಶೂ ಕಳ್ಳರ ಅವಾಂತರ ಜೋರಾಗಿದೆ.
ಸದ್ಯ 50 ರಿಂದ 60 ವರ್ಷದ ಕಳ್ಳನ ಬಗ್ಗೆ ಪೊಲೀಸರು ತಲೆಕೆಡಸಿಕೊಂಡಿದ್ದು, ಬೆಳಗ್ಗೆ 3 ರಿಂದ 5 ಗಂಟೆಯೊಳಗೆ ಕದ್ದು ಪರಾರಿಯಾಗುತ್ತಾರೆ. ಈ ಶೂ ಕಳ್ಳರ ಕೈ ಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ : ಟೆಕ್ಕಿ ಶರ್ಮಿಳಾ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ | ತನಿಖೆ ವೇಳೆ ಬಯಲಾಯ್ತು ಕೊಲೆ ರಹಸ್ಯ!



















