ಹಾಸನ: ಹಾಸನ ನಗರದಲ್ಲಿ ಶಾಲಾ ಬಾಲಕಿಯನ್ನು ಹಿಂಬಾಲಿಸಿ ಭೀತಿಗೊಳಿಸಿದ ಘಟನೆ ಜನವರಿ 17ರ ಶನಿವಾರ ಮಧ್ಯಾಹ್ನ ನಡೆದಿದ್ದು, ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಯಾರೋ ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂಬುದನ್ನು ಅರಿತ ಬಾಲಕಿ ಭಯದಿಂದ ಓಡೋಡಿ ಮನೆ ಕಡೆಗೆ ತೆರಳಿದ್ದಾಳೆ. ಆದರೆ ಕಿಡಿಗೇಡಿ ಬಾಲಕಿಯನ್ನು ಬೆನ್ನಟ್ಟಿ ಮನೆ ಗೇಟ್‌ವರೆಗೂ ಬಂದಿದ್ದಾನೆ. ಭಯಗೊಂಡ ಬಾಲಕಿ ಗೇಟ್ ಒಳಗೆ ಓಡಿ ಗೇಟ್ ಲಾಕ್ ಮಾಡಿಕೊಂಡು ಅಮ್ಮಾ ಬಾಗಿಲು ತೆಗಿ ಎಂದು ಆತಂಕದಿಂದ ಕಿರುಚಾಡಿದ್ದಾಳೆ.
ಈ ಸಂದರ್ಭದಲ್ಲೂ ದುಷ್ಟ ಗೇಟ್ ಬಳಿ ನಿಂತು ಒಳಗೆ ಇಣುಕಿ ನೋಡುತ್ತಾ ಆವಾಜ್ ಹಾಕಿ ನಂತರ ಅಲ್ಲಿಂದ ವಾಪಸ್ ಹೋಗಿರುವುದಾಗಿ ತಿಳಿದುಬಂದಿದೆ. ಈ ಘಟನೆ ಹಾಸನ ನಗರದ 80 ಅಡಿ ರಸ್ತೆ ಪ್ರದೇಶದಲ್ಲಿ, ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ತನಿಖೆ ಆರಂಭಿಸಿದ್ದಾರೆ. ಕಿಡಿಗೇಡಿಯನ್ನು ಪತ್ತೆಹಚ್ಚಲು ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.
ಇದನ್ನೂ ಓದಿ : ಯರ್ರಾಬಿರ್ರಿ ಡ್ರೈವಿಂಗ್ ಮಾಡಿದ ತಮಿಳುನಾಡು ಬಸ್ ಡ್ರೈವರ್‌ಗೆ ಗ್ರಹಚಾರ ಬಿಡಿಸಿದ ಬೆಂಗಳೂರು ಮಹಿಳೆ



















