ಪಾಕಿಸ್ತಾನದ ಶಾಹಿದ್ ಅಫ್ರಿದಿಗೆ ಭಾರತದ ಮಾಜಿ ಕ್ರಿಕೆಟಿಗ ಶಿಖರ್ ಧವನ್ ಟಾಂಗ್ ಕೊಟ್ಟಿದ್ದಾರೆ.
ಈ ಹಿಂದಿನ ಕಾರ್ಗಿಲ್ ಯುದ್ಧದಲ್ಲೂ ಮಣ್ಣು ಮುಕ್ಕಿದ್ದೀರಿ. ಈ ಬಾರಿಯೂ ಮುಗ್ಗರಿಸಿ ಬಿದ್ದಾಗಿದೆ. ಇನ್ನೆಷ್ಟು ಅಂತಾ ಮಕಾಡೆ ಮಲಗ್ತೀರಿ? ಖಾಲಿ ಕೂತು ಹರಟೆಗಾಗಿ ಆರೋಪಗಳನ್ನು ಮಾಡುವುದನ್ನು ಬಿಟ್ಟು ಆ ಬುದ್ಧಿವಂತಿಕೆಯನ್ನು ನಿಮ್ಮ ದೇಶದ ಏಳಿಗೆಗೆ ಯೋಚಿಸಿದರೆ ನಯಾ ಪೈಸೆಯಾದರೂ ಉಪಯೋಗವಾಗುತ್ತಿತ್ತು ಎಂದು ಸಲಹೆ ನೀಡಿದ್ದಾರೆ.
ನಮ್ಮ ಸೇನೆಯ ಮೇಲೆ ನಮಗೆ ಹೆಮ್ಮೆಯಿದೆ. ಭಾರತ್ ಮಾತಾಕಿ ಜೈ. ಹೀಗಂತಾ ಕಾಲ್ಕೆರೆದು ಜಗಳಕ್ಕೆ ನಿಂತಿದ್ದ ಪಾಕ್ ಮಾಜಿ ಕ್ರಿಕೆಟರ್ ಶಾಹಿದ್ ಆಫ್ರಿದಿಗೆ ಶಿಖರ್ ಧವನ್ ಟಾಂಗ್ ನೀಡಿದ್ದಾರೆ. ನಿನ್ನೆಯಷ್ಟೇ ಆಫ್ರಿದಿ ಪಹಲ್ಗಾಮ್ ವಿಚಾರವಾಗಿ ಹೇಳಿಕೆ ನೀಡಿದ್ದರು. ಇದೆಲ್ಲಾ ಭಾರತದ ಸ್ವಯಂ ಸೃಷ್ಟಿ ಅಂದಿದ್ದ ಆಫ್ರಿದಿ, ಪಾಕಿಸ್ತಾನಿಗಳು ಶಾಂತಿ ಪ್ರಿಯರು ಅಂತಾ ರಾಗ ತೆಗೆದಿದ್ದರು. ಇದಕ್ಕುತ್ತರವಾಗಿ ಪ್ರತಿಕ್ರಿಯಿಸಿರುವ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಶಿಖರ್ ಧವನ್ ನಿಮ್ಮ ಬುದ್ಧಿವಂತಿಕೆಯನ್ನು ನಿಮ್ಮ ದೇಶದ ಏಳಿಗೆಗೆ ಖರ್ಚು ಮಾಡಿ ಅಂತಾ ಕಪಾಳಮೋಕ್ಷ ಮಾಡಿದ್ದಾರೆ.



















