ಜಪಾನ್ ನ ನೂತನ ಪ್ರಧಾನಿಯಾಗಿ ಮಾಜಿ ರಕ್ಷಣಾ ಸಚಿವ ಶಿಗೆರು ಇಶಿಬಾ ಆಯ್ಕೆಯಾಗಿದ್ದಾರೆ.
ಫ್ಯೂಮಿಯೊ ಕಿಶಿಡಾ ಅವರ ಉತ್ತರಾಧಿಕಾರಿಯಾಗುವುದಕ್ಕಾಗಿ ಜಾಪಾನ್ ನಲ್ಲಿ ಬರೋಬ್ಬರಿ 9 ಜನ ಅಬ್ಯರ್ಥಿಗಳ ಮಧ್ಯೆ ಪೈಪೋಟಿ ನಡೆದಿತ್ತು. ಈ ಫೈಟ್ ನಲ್ಲಿ ಶಿಗೆರು ಇಶಿಬಾ ಗೆದ್ದು ಬೀಗಿದ್ದಾರೆ. ಈ ಹಿನ್ನೆಲೆಯಲ್ಲಿ ಅ. 1ರಂದು ಇಶಿಬಾ ಜಪಾನ್‌ನ 102 ನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಜಪಾನ್‌ನ ಮೊದಲ ಮಹಿಳಾ ನಾಯಕಿಯಾಗಲು ಸ್ಪರ್ಧಿಸಿದ್ದ ಆರ್ಥಿಕ ಭದ್ರತಾ ಸಚಿವೆ ಸಾನೆ ತಕೈಚಿ ಅವರನ್ನು ಶಿಗೆರು ಸೋಲಿಸಿದರು. ಇಶಿಬಾ ಒಟ್ಟು 215 ಮತಗಳನ್ನು ಪಡೆದರೆ, ತಕೈಚಿ 194 ಮತ ಗಳಿಸಿದರು. ಈ ದೇಶದ ಸುರಕ್ಷತೆಗೆ ನಾನು ಹಗಲಿರುಳು ಶ್ರಮಿಸುತ್ತೇನೆ. ಪ್ರಾಮಾಣಿಕವಾಗಿ ನನ್ನ ಸೇವೆ ಮಾಡುತ್ತಿದ್ದೇನ ಎಂದು ಶಿಗೆರು ಹೇಳಿದ್ದಾರೆ.
ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದಾರೆ. ಸಂಸತ್ತಿನ ಅನುಮೋದನೆಯ ನಂತರ, ಹೊಸ ನಾಯಕ ಹೊಸ ಸಚಿವ ಸಂಪುಟವನ್ನು ರಚಿಸಲಾಗಿತ್ತು.