ಬೆಂಗಳೂರು: ಸಾಹಿತಿ, ಪತ್ರಕರ್ತೆ, ಯಕ್ಷಗಾನ ಪ್ರಸಂಗ ಕರ್ತೆ, ಸಂಘಟಕಿ, ಧಾರ್ಮಿಕ ಚಿಂತಕಿ ಕರಾವಳಿ ಮೂಲದ, ದೇವಾಡಿಗ ಸಮುದಾಯದ ಡಾ. ಜ್ಯೋತಿ ಜೀವನ್ ಸ್ವರೂಪ್ ಅವರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಒಲಿದು ಬಂದಿದೆ.
ಡಾ. ಜ್ಯೋತಿ ಜೀವನ್ ಸ್ವರೂಪ್ ಅವರು ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸಮಾಜ ಸೇವೆಗಾಗಿ ಶ್ರಮಿಸಿದ ಫಲವಾಗಿ ಅಂತಾರಾಷ್ಟ್ರೀಯ ವನಿತಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಮಾರ್ಚ್ 9ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಕರ್ನಾಟಕ ಸೋಷಿಯಲ್ ಕ್ಲಬ್, ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್, ಚೇತನ ಫೌಂಡೇಶನ್ ಧಾರವಾಡ ಸಹಯೋಗದೊಂದಿಗೆ ನಡೆದ ಮಹಿಳಾ ಸಾಹಿತ್ಯ ಸಮ್ಮೇಳನ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪ್ರಸಿದ್ಧ ಸಾಹಿತಿಗಳು, ನಾಯಕರು, ಸೆಲೆಬ್ರಿಟಿಗಳು, ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಜ್ಯೋತಿ ಅವರ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.