ಶಿರಾಳಕೊಪ್ಪ ಜನರಿಗೆ ಶೀಘ್ರವೇ ಶರಾವತಿ ನೀರಿನ ಭಾಗ್ಯ ಪ್ರಾಪ್ತಿಯಾಗಲಿದೆ. ನಗರದ ಕುಡಿಯುವ ನೀರಿನ ಬವಣೆ ತೀರಿಸಲು ಯೋಜನೆ ರೂಪಿಸಲಾಗಿದ್ದು, ಸೊರಬ ತಾಲೂಕಿನ ಶಿಗ್ಗದ ಸಮೀಪ ಶರಾವತಿ ನದಿಯಿಂದ ಪಂಪ್ ಮಾಡಿದ ನೀರು ಲಭ್ಯವಾಗುತ್ತಿದೆ.
ತಾತ್ಕಾಲಿಕವಾಗಿ ಅಲ್ಲಿಂದ ಪೈಪ್‌ಲೈನ್ ಮೂಲಕ ಟ್ಯಾಂಕ್ ಗಳಿಗೆ ನೀರು ತುಂಬಿಸಿ ಜನರಿಗೆ ಒದಗಿಸಲಾಗುವುದು. ಇನ್ನು ಈ ಯೋಜನೆ ಒಂದು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಶಾಸಕ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಬೇಸಿಗೆಯಲ್ಲಿ ಕುಡಿಯೋ ನೀರಿಗೆ ಶಿಕಾರಿಪುರ ಸುತ್ತ ಮುತ್ತ ವ್ಯಾಪ್ತಿಯಲ್ಲಿ ಆವರಿಸುತ್ತಿದ್ದ ಬರ ನೀಗಲಿದೆ ಅಂತಾ ವಿಜಯೇಂದ್ರ ಅಭಿಪ್ರಾಯಪಟ್ಟಿದ್ದಾರೆ.



















