ಬೆಂಗಳೂರು: ಭುವನ್ ಫಿಲಂಸ್ ಬ್ಯಾನರ್ ನಲ್ಲಿ ಭಾಗ್ಯ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ “ಶಾನು ಭೋಗರ ಮಗಳು” ಚಲನಚಿತ್ರವು ಫೆಬ್ರವರಿ 21 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.
ಪ್ರಮುಖ ತಾರಗಣದಲ್ಲಿ ರಾಗಿಣಿ ಪ್ರಜ್ವಲ್, ನಿರಂಜನ್ ಶೆಟ್ಟಿ, ಕಿಶೋರ್, ರಮೇಶ್ ಭಟ್, ಸುಧಾ ಬೆಳವಾಡಿ ಹಾಗೂ ಕೆಲವು ಹಿರಿಯ ಕಲಾವಿದರು ಅಭಿನಯಿಸಿರುತ್ತಾರೆ. ಈ ಚಿತ್ರಕ್ಕೆ ಸಿ.ಎಂ. ನಾರಾಯಣ್ ಅವರು ನಿರ್ಮಾಪಕರಾಗಿದ್ದು, ಕೂಡ್ಲು ರಾಮಕೃಷ್ಣ ನಿರ್ದೇಶನ ಮಾಡಿದ್ದಾರೆ.