ಬಿಎಂಟಿಸಿ ಬಸ್ ನಲ್ಲಿ ವೃದ್ಧ ಪ್ರಯಾಣಿಕನೋರ್ವ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.
ವಿದ್ಯಾರಣ್ಯಪುರದಲ್ಲಿ ಸೋಮವಾರ ಈ ಘಟನೆ ನಡೆದಿದೆ. ಮಹಿಳೆಯೊಬ್ಬರು ಬಸ್ ಸೀಟ್ ನಲ್ಲಿ ಕುಳಿತುಕೊಂಡಾಗ ಹಿಂಬದಿಯಿಂದ ಕುಳಿತುಕೊಂಡಿದ್ದ ವೃದ್ಧ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.
ಆ ಮಹಿಳೆಯ ಸೀಟಿನ ಹಿಂಭಾಗವನ್ನು ಪದೇ ಪದೇ ಮುಟ್ಟಿದ್ದಾನೆ. ತನ್ನ ಬೆರಳಿನಿಂದ ಆಕೆಯ ಕೈಯನ್ನು ಸ್ಪರ್ಶಿಸಲು ಪ್ರಯತ್ನಿಸಿದ್ದಾನೆ. ಇದರಿಂದಾಗಿ ಆಘಾತಕ್ಕೊಳಗಾದ ಮಹಿಳೆ ಬಸ್ ನಲ್ಲಿಯೇ ಆತನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಪ್ರಯಾಣಿಕರೊಬ್ಬರು ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ.
ಘಟನೆಯ ನಂತರ ಆ ವ್ಯಕ್ತಿ ಒಂದು ಮಾತನ್ನೂ ಹೇಳದೆ ಸದ್ದಿಲ್ಲದೆ ಬಸ್ಸಿನಿಂದ ಇಳಿದಿದ್ದಾನೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಪೊಲೀಸರು ವಿಡಿಯೋ ಆಧರಿಸಿ ತನಿಖೆ ಕೈಗೊಂಡಿದ್ದಾರೆ.



















