ಫಿಲಿಪೈನ್ಸ್ : ಆಗ್ನೇಯ ಏಷ್ಯಾ ರಾಷ್ಟ್ರವಾದ ಫಿಲಿಪೈನ್ಸ್‌ನಲ್ಲಿ 180 ಕಿಲೋ ಮೀಟರ್ ವೇಗದಲ್ಲಿ ಭೀಕರ ಬೀಸಿದ ಚಂಡಮಾರುತದಿಂದ ಹಲವು ನಗರಗಳು ತೀವ್ರ ಹಾನಿಗೀಡಾಗಿವೆ. ಈವರೆಗೆ 114 ಮಂದಿ ಸಾವಿಗೀಡಾಗಿದ್ದು, ಇನ್ನೂ ಹಲವಾರು ಮಂದಿ ನಾಪತ್ತೆಯಾಗಿದ್ದಾರೆ. ಇದರಿಂದ ಅಲ್ಲಿನ ಸರ್ಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದೆ.
ಪ್ರತಿ ವರ್ಷದಂತೆ ಈ ವರ್ಷವು ಚಂಡಮಾರುತ ಫಿಲಿಪೈನ್ಸ್‌ಗೆ ಅಪ್ಪಳಿಸಿದೆ. ಸದ್ಯ ಮಾರಕ ಚಂಡಮಾರುತ ದಕ್ಷಿಣ ಚೀನಾ ಸಮುದ್ರದ ಕಡೆ ಸಾಗಿದೆ. ದೇಶದ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ಅವರು ಗುರುವಾರ ತುರ್ತು ಪರಿಸ್ಥಿತಿ ಘೋಷಿಸುವ ಮೂಲಕ ಜನರ ರಕ್ಷಣೆಗೆ ಧಾವಿಸಿದ್ದಾರೆ.
ಚಂಡಮಾರುತ ಸೃಷ್ಟಿ ಮಾಡಿದ ಭೀಕರತೆ ಬಗ್ಗೆ ನಡೆದ ಸಭೆಯಲ್ಲಿ ಮಾರ್ಕೋಸ್ ಅವರು, ಇದೊಂದು ರಾಷ್ಟ್ರೀಯ ವಿಪತ್ತಾಗಿದೆ. ಜನರಿಗೆ ತುರ್ತು ನೆರವು ನೀಡಬೇಕಾಗಿದೆ. ಆಹಾರ ಸಂಗ್ರಹಣೆ ಮತ್ತು ಬೆಲೆ ಏರಿಕೆಯನ್ನು ತಡೆಯಲು ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ನಾಳೆ ಉಡುಪಿಯ ಅಂಬಲಪಾಡಿಯಲ್ಲಿ ನಟ ಹರೀಶ್ ರಾಯ್ ಅಂತ್ಯಕ್ರಿಯೆ



















