ಬೆಂಗಳೂರು: ಇಲ್ಲಿಯ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ (Electronic City Flyover) ಸರಣಿ ಅಪಘಾತ ಸಂಭವಿಸಿದ ಪರಿಣಾಮ ಸವಾರರು ಸಂಕಷ್ಟ ಪಡುವಂತಾಗಿತ್ತು.
ಕಾರು ವೇಗವಾಗಿ ತೆರಳಿ ಮುಂದೆ ಸಾಗುತ್ತಿದ್ದ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಡಿಕ್ಕಿಗೆ ಒಳಗಾದ ಕಾರು ತನ್ನ ಮುಂದೆ ಸಾಗುತ್ತಿದ್ದ ಮತ್ತೊಂದು ಫಾರ್ಚುನರ್ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಘಟನೆಯಲ್ಲಿ ಒಟ್ಟು ಮೂರು ಕಾರುಗಳು ಹಾಗೂ ಬೈಕ್ ಜಖಂ ಆಗಿವೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಸರಣಿ ಅಪಘಾತದಿಂದಾಗಿ ಫ್ಲೈಓವರ್ ಸುತ್ತಮುತ್ತ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಕಿಲೋಮೀಟರ್‌ಗಟ್ಟಲೆ ವಾಹನಗಳು ನಿಂತು ಸವಾರರು ರಾತ್ರಿ ವೇಳೆ ಸಂಕಷ್ಟ ಪಡುವಂತಾಯಿತು. ಆನಂತರ ಪೊಲೀಸರು ಬಂದು ವಾಹನಗಳನ್ನು ತೆರವುಗೊಳಿಸಿದರು. ಈ ಕುರಿತು ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.