ಕಲಬುರಗಿ: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದವ 11 ವರ್ಷಗಳ ನಂತರ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.
ಪೊಲೀಸ್ ಕಾನ್‌ಸ್ಟೆಬಲ್ ವೊಬ್ಬರನ್ನು (kill) ಕೊಲೆ ಮಾಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಜೈಲಿನಲ್ಲೂ ಕಿರಿಕ್ ಮಾಡಿದ್ದ. ಆಗ ಜೈಲಿನಲ್ಲೂ ಕಿರಿಕ್ ಮಾಡಿ ಮತ್ತೊಂದು ಜೈಲಿಗೆ ಶಿಫ್ಟ್ ಆಗಿದ್ದ. ಅಲ್ಲೂ ಕಿರಿಕ್ ಮಾಡಿ ಅನಾರೋಗ್ಯದ ನಾಟಕವಾಡಿ ಆಸ್ಪತ್ರೆಗೆ ದಾಖಲಾಗಿದ್ದ. ಆಸ್ಪತ್ರೆಯಲ್ಲಿ ಜೈಲು ಕಾವಲು ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಅಗಿದ್ದ. ಮಹಾರಾಷ್ಟ್ರ ಪುಣೆಯಲ್ಲಿ ತಲೆಮರೆಸಿಕೊಂಡು, ಹೆಸರು ಬದಲಿಸಿಕೊಂಡು ಪೊಲೀಸ್ ಇನ್ಫಾರ್ಮರ್ ಆಗಿ ಕೆಲಸ ಮಾಡುತ್ತಿದ್ದ. ಈಗ ಬರೋಬ್ಬರಿ 11 ವರ್ಷಗಳ ನಂತರ ಹೆಡೆಮುರಿ ಕಟ್ಟಿ ಮತ್ತೆ ಜೈಲಿಗಟ್ಟಿದ್ದಾರೆ.
ಪೊಲೀಸ್ ಕಾನ್‌ಸ್ಟೆಬಲ್ ನನ್ನು ಕೊಲೆಗೈದು ಖಾಕಿಗೆ ಚಳ್ಳೆಹಣ್ಣು ತಿನ್ನಿಸಿ ಮಹಾರಾಷ್ಟ್ರದ ಪುಣೆಯಲ್ಲಿ ಠಿಕಾಣಿ ಹೂಡಿದ್ದ. ಕೈದಿಯ ಹೆಸರು ಅಂಬರಿಷ್ ನಾಟಿಕಾರ್. ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಭಾಗೋಡಿ ಗ್ರಾಮದ ನಿವಾಸಿ. 2009 ರಲ್ಲಿ ಕಲಬುರಗಿಯ ಸಬ್ ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯ ಕಲಬುರಗಿ ನಗರದ ಬಿದ್ದಾಪುರ ಕಾಲೋನಿಯಲ್ಲಿ ಜಗಳವಾಗಿತ್ತು. ಕಾನ್ಸಟೇಬಲ್ ಅಶ್ವಿನಕುಮಾರ್ ಹೋಗಿ ಈತನನ್ನ ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಬರುವಾಗ ಕಾನ್ಸಟೇಬಲ್ ಅಶ್ವಿನಕುಮಾರ್ ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಿದ್ದ.