ಪಾಟ್ನಾ: ಗೆಳೆಯನ ಜೊತೆ ಮಾತನಾಡಲು 1.5 ಲಕ್ಷ ರೂ. ಮೌಲ್ಯದ ಐಫೋನ್ (iphone) ಕೊಡಿಸದಿದ್ದಕ್ಕೆ ಯುವತಿ ಕೈ ಕೊಯ್ದುಕೊಂಡು ಹುಚ್ಚಾಟ ಮೆರೆದಿರುವ ಘಟನೆ ನಡೆದಿದೆ. ಈ ಘಟನೆ ಬಿಹಾರದ (Bihar) ಮುಂಗೇರ್‌ನಲ್ಲಿ ನಡೆದಿದೆ.
ಯುವತಿಯೊಬ್ಬಳು ತನ್ನ ಬಾಯ್‌ಫ್ರೆಂಡ್ ಜೊತೆ ಮಾತನಾಡಲು 1.5 ಲಕ್ಷ ರೂ. ಐಫೋನ್ ಕೇಳಿದ್ದಾಳೆ. ಆದರೆ ಆಕೆಯ ಪೋಷಕರು ಮೊಬೈಲ್ ಕೊಡಿಸಲು ನಿರಾಕರಿಸಿದ್ದಾರೆ. ಇದರಿಂದ ಬ್ಲೇಡ್‌ನಿಂದ ತನ್ನ ಮಣಿಕಟ್ಟನ್ನು ಸೀಳಿಕೊಂಡು, ಆ ನಂತರ ದೇಹದ ಬೇರೆ ಭಾಗಗಳಿಗೂ ಗಾಯ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ನಾನು ನನ್ನ ಬಾಯ್‌ಫ್ರೆಂಡ್ ಜೊತೆ ಮಾತನಾಡಬೇಕು ಎಂದು ಕೇಳಿದ್ದಾಳೆ. ಆದರೆ ತಾಯಿ ಐಫೋನ್ ಕೊಡಿಸಲು ನಮ್ಮ ಬಳಿ ಅಷ್ಟೊಂದು ಹಣ ಇಲ್ಲ ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ಯುವತಿ, ಬ್ಲೇಡ್‌ನಿಂದ ತನ್ನ ಮಣಿಕಟ್ಟನ್ನು ಸೀಳಿಕೊಳ್ಳಲು ಪ್ರಾರಂಭಿಸಿದಳು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಯುವತಿಯ ತಾಯಿ ಮಾತನಾಡಿ, ನಾವು ಬಡವರು. ಅವಳಿಗೆ ಇಷ್ಟೊಂದು ದುಬಾರಿ ಮೊಬೈಲ್ ಕೊಡಿಸಲು ಸಾಧ್ಯವಿಲ್ಲ. ನನ್ನ ಗಂಡ ಕೂಲಿ ಕೆಲಸದಿಂದ ಗಳಿಸುವ ಹಣದಿಂದ ನಮ್ಮ ಮನೆ ನಿರ್ವಹಿಸುತ್ತಿದ್ದೇವೆ. ಆದರೆ, ಇವಳು ಈ ರೀತಿ ಮಾಡಿದ್ದು ತುಂಬಾ ನೋವಾಗಿದೆ ಎಂದು ತಾಯಿ ಕಣ್ಣೀರು ಸುರಿಸಿದ್ದಾರೆ. ಸದ್ಯ ಯುವತಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.