ಮುಂದಿನ ವರ್ಷ ನಡೆಯಲಿರುವ ಅಂಡರ್-19 ಮಹಿಳಾ ವಿಶ್ವಕಪ್ ಎರಡನೇ ಆವೃತ್ತಿಯ ವೇಳಾಪಟ್ಟಿಯನ್ನು ಐಸಿಸಿ ಇಂದು ಬಿಡುಗಡೆ ಮಾಡಿದೆ.
ಈ ಬಾರಿಯ ಟೂರ್ನಿಗೆ ಮಲೇಷ್ಯಾ ಆತಿಥ್ಯ ವಹಿಸಿದ್ದು, ವೇಳಾಪಟ್ಟಿಯಂತೆ ಜನವರಿ 18 ರಿಂದ ಫೆಬ್ರವರಿ 2 ರ ವರೆಗೆ ಟೂರ್ನಿ ನಡೆಯಲಿದೆ.
ಈ ವಿಶ್ವಕಪ್ ನಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿವೆ. ಪಂದ್ಯಾವಳಿ ನಡೆಯುವುದಕ್ಕೂ ಮುನ್ನ ಎಲ್ಲಾ ತಂಡಗಳು ಜನವರಿ 13 ರಿಂದ 16 ರ ವರೆಗೆ ಅಭ್ಯಾಸ ಪಂದ್ಯಗಳನ್ನು ಆಡಲಿವೆ. ಹಾಲಿ ಚಾಂಪಿಯನ್ ಭಾರತ ತಂಡ ತನ್ನ ಮೊದಲ ಪಂದ್ಯವನ್ನು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ.
ಭಾರತದ ಅಭಿಯಾನ ಜನವರಿ 19ರಿಂದ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸುತ್ತಿದ್ದು, ತಲಾ 4 ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದೆ.
ಗುಂಪು ಎ: ಭಾರತ, ವೆಸ್ಟ್ ಇಂಡೀಸ್, ಶ್ರೀಲಂಕಾ, ಮಲೇಷ್ಯಾ
ಗುಂಪು ಬಿ: ಇಂಗ್ಲೆಂಡ್, ಪಾಕಿಸ್ತಾನ, ಐರ್ಲೆಂಡ್, ಯುಎಸ್ಎ
ಗುಂಪು ಸಿ: ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಆಫ್ರಿಕಾ ಕ್ವಾಲಿಫೈಯರ್, ಸಮೋವಾ
ಗುಂಪು ಡಿ: ಆಸ್ಟ್ರೇಲಿಯಾ, ಬಾಂಗ್ಲಾದೇಶ, ಏಷ್ಯಾ ಕ್ವಾಲಿಫೈಯರ್, ಸ್ಕಾಟ್ಲೆಂಡ್ ತಂಡಗಳು ಸ್ಥಾನ ಪಡೆದಿವೆ. ಟಿ20 ಮೊದಲ ವಿಶ್ವಕಪ್ ಭಾರತದ ಪಾಲಾಗಿತ್ತು. ಈ ಬಾರಿ ಮತ್ತೆ ಕಪ್ ಗೆಲ್ಲಲು ಭಾರತ ತಂಡ ಹವಣಿಸುತ್ತಿದೆ. ಹಲವಾರು ತಂಡಗಳು ಕಪ್ ಮೇಲೆ ಕಣ್ಣಿಟ್ಟಿವೆ.