ಬೆಂಗಳೂರು: ಫೋನ್ ಬಿಲ್, ರಿಚಾರ್ಜ್, ಸರ್ಕಾರದ ಯಾವುದೇ ಶುಲ್ಕಗಳನ್ನು ಪಾವತಿಸಲು ನಾವು ಕ್ರೆಡಿಟ್ ಕಾರ್ಡ್ ಗಳನ್ನು ಬಳಸುತ್ತೇವೆ. ಕ್ರೆಡಿಟ್ ಕಾರ್ಡ್ ಬಳಸಿದರೆ 45 ದಿನಗಳನ್ನು ಬಿಟ್ಟು ಪಾವತಿಸಬಹುದು ಹಾಗೂ ರಿವಾರ್ಡ್ ಪಾಯಿಂಟ್ ಗಳು ಸಿಗುತ್ತವೆ. ಅವುಗಳ ಪ್ರಯೋಜನ ಪಡೆಯಬಹುದು ಎಂದು ಕ್ರೆಡಿಟ್ ಕಾರ್ಡ್ ಬಳಸುತ್ತೇವೆ. ಆದರೆ, ಸೆಪ್ಟೆಂಬರ್ 1ರಿಂದ ಎಸ್ ಬಿ ಐ ಕ್ರೆಡಿಟ್ ಕಾರ್ಡ್ ಬಳಸುವವರಿಗೆ ರಿವಾರ್ಡ್ ಪಾಯಿಂಟ್ಸ್ ಸಿಗುವುದಿಲ್ಲ.
ಹೌದು, ಸೆಪ್ಟೆಂಬರ್ 1 ರಿಂದ ಎಸ್ ಬಿ ಐ ಆಯ್ದ ಕಾರ್ಡ್ಗಳನ್ನು ಬಳಸಿಕೊಂಡು ಡಿಜಿಟಲ್ ಗೇಮಿಂಗ್ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ಪಾವತಿಗಳ ಮೇಲೆ ರಿವಾರ್ಡ್ ಪಾಯಿಂಟ್ ಗಳನ್ನು ನೀಡುವುದನ್ನು ಕಂಪನಿ ನಿಲ್ಲಿಸುತ್ತಿದೆ. ಇದರಿಂದ ಗ್ರಾಹಕರಿಗೆ ಯಾವುದೇ ರಿವಾರ್ಡ್ ಪಾಯಿಂಟ್ ಗಳು ಸಿಗುವುದಿಲ್ಲ.
ಯಾವ ಕಾರ್ಡ್ ಗಳಿಗೆ ಅನ್ವಯ?
ಲೈಫ್ ಸ್ಟೈಲ್ ಹೋಮ್ ಸೆಂಟರ್ ಎಸ್ ಬಿ ಐ ಕಾರ್ಡ್, ಎಸ್ ಬಿ ಐ ಕಾರ್ಡ್ ಸೆಲೆಕ್ಟ್, ಮತ್ತು ಲೈಫ್ ಸ್ಟೈಲ್ ಹೋಮ್ ಸೆಂಟರ್ ಎಸ್ಬಿಐ ಕಾರ್ಡ್ ಪ್ರೈಮ್ ಕಾರ್ಡ್ ಗಳನ್ನು ಬಳಸಿ, ಪೇಮೆಂಟ್ ಮಾಡಿದರೆ, ಅದಕ್ಕೆ ರಿವಾರ್ಡ್ ಪಾಯಿಂಟ್ ಗಳು ಸಿಗುವುದಿಲ್ಲ ಎಂದು ಎಸ್ ಬಿ ಐ ತಿಳಿಸಿದೆ.
ಕೆಲ ದಿನಗಳ ಹಿಂದಷ್ಟೇ ವಿಮಾನ ಅಪಘಾತಗಳಲ್ಲಿ ಮೃತಪಟ್ಟವರಿಗೆ ನೀಡುತ್ತಿದ್ದ 1 ಕೋಟಿ ರೂ. ವಿಮೆ ಕವರೇಜ್ ಅನ್ನು ಕೂಡ ಎಸ್ ಬಿ ಐ ರದ್ದುಗೊಳಿಸಿದೆ. ಹಲವಾರು ಕೋ-ಬ್ರಾಂಡೆಡ್ ಕಾರ್ಡ್ ಗಳಿಂದ ಪೂರಕ ಏರ್ ಆಕ್ಸಿಡೆಂಟ್ ಇನ್ಶೂರೆನ್ಸ್ ಅನ್ನು ಹಿಂಪಡೆದಿದೆ. ಯುಕೋ ಬ್ಯಾಂಕ್ ಎಸ್ ಬಿ ಐ ಕಾರ್ಡ್ ಎಲೈಟ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಲಹಾಬಾದ್ ಬ್ಯಾಂಕ್ ಎಸ್ ಬಿ ಐ ಕಾರ್ಡ್ ಎಲೈಟ್ ಗೆ ಇದ್ದ 1 ಕೋಟಿ ರೂ. ವಿಮೆ ಕವರೇಜ್ ಅನ್ನು ಕೂಡ ರದ್ದುಗೊಳಿಸಿದೆ.