ಬೆಂಗಳೂರು: ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇದೆ ಎಂಬುದನ್ನು ತಿಳಿಯುವುದು ಈಗ ಸುಲಭವಾಗಿದೆ. ಸ್ಮಾರ್ಟ್ ಫೋನ್ ಇರುವವರು, ಯುಪಿಐ ನೋಂದಣಿ ಮಾಡಿಕೊಂಡವರು ಮೊಬೈಲ್ ನಲ್ಲೇ ಕ್ಷಣಾರ್ಧದಲ್ಲಿ ಬ್ಯಾಲೆನ್ಸ್ ಚೆಕ್ ಮಾಡಬಹುದು. ಆದರೆ, ನೆಟ್ ಬ್ಯಾಂಕಿಂಗ್, ಯುಪಿಐ, ಸ್ಮಾರ್ಟ್ ಫೋನ್ ಇಲ್ಲದವರು ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಬೇಕು ಎಂದರೆ ಬ್ಯಾಂಕಿಗೇ ತೆರಳಬೇಕು. ಆದರೆ, ಎಸ್ ಬಿ ಐ ಹೊಸ ಸೇವೆ ಆರಂಭಿಸಿದ್ದು, ಮಿಸ್ಡ್ ಕಾಲ್ ಹಾಗೂ ಎಸ್ಎಂಎಸ್ ಮೂಲಕವೇ ಬ್ಯಾಂಕ್ ಬ್ಯಾಲೆನ್ಸ್ ಕುರಿತ ಮಾಹಿತಿ ನೀಡುತ್ತದೆ.
ಎಸ್ಎಂಎಸ್ ಮೂಲಕ ತಿಳಿಯುವುದು ಹೇಗೆ?
ಎಸ್ ಎಂ ಎಸ್ ಮೂಲಕ ಎಸ್ ಬಿ ಐ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಬಹುದಾಗಿದೆ. ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ “BAL” ಎಂದು ಟೈಪ್ ಮಾಡಿ, 09223766666 ಸಂಖ್ಯೆಗೆ ಎಸ್ ಎಂ ಎಸ್ ಕಳುಹಿಸಿದರೆ ಬ್ಯಾಂಕ್ ಬ್ಯಾಲೆನ್ಸ್ ಮಾಹಿತಿ ಲಭ್ಯವಾಗುತ್ತದೆ. ಹಾಗೆಯೇ, ಮಿನಿ ಸ್ಟೇಟ್ ಬೇಕಾಗಿದ್ದರೆ, “MSTMT” ಎಂದು ಟೈಪ್ ಮಾಡಿ 09223866666 ಸಂಖ್ಯೆಗೆ ಎಸ್ ಎಂ ಎಸ್ ಕಳುಹಿಸಬೇಕು.
ಮಿಸ್ಡ್ ಕಾಲ್ ಮೂಲಕವೂ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡುವ ಜತೆಗೆ ಮಿನಿ ಸ್ಟೇಟ್ ಮೆಂಟ್ ಪಡೆಯಬಹುದಾಗಿದೆ. ಬ್ಯಾಲೆನ್ಸ್ ಚೆಕ್ ಮಾಡಲು ಗ್ರಾಹಕರು ನೋಂದಾಯಿತ ಮೊಬೈಲ್ ನಂಬರ್ ಮೂಲಕ 09223766666 ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಬೇಕು. ಮಿನಿ ಸ್ಟೇಟ್ ಮೆಂಟ್ ಪಡೆಯಲು 09223866666 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬಹುದಾಗಿದೆ.