ಬೆಂಗಳೂರು : ಮಕರ ಸಂಕ್ರಮಣದ ಸಂಭ್ರಮ ಬೆಂಗಳೂರಿನಲ್ಲಿ ಮನೆಮಾಡಿದ್ದು, ನಗರಾದ್ಯಂತ ಕಬ್ಬು, ಗೆಣಸು, ಅವರೆಕಾಯಿ ಸಿದ್ಧ ಎಳ್ಳುಬೆಲ್ಲದ ವ್ಯಾಪಾರ ಜೋರಾಗಿದೆ. ಇಂದು ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ವಿಶೇಷವಾಗಿ ನಗರದ ಇತಿಹಾಸ ಪ್ರಸಿದ್ದ ಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸೂರ್ಯರಶ್ಮಿ ಶಿವಲಿಂಗವನ್ನು ಸ್ಪರ್ಶಿಸಲು ಕ್ಷಣಗಣನೆ ಆರಂಭವಾಗಿದೆ.
ಸೂರ್ಯರಶ್ಮಿಯ ನೆಲಮಟ್ಟಕ್ಕಿಂತ 120 ಅಡಿ ಆಳದಲ್ಲಿರುವ ಗವಿ ಗಂಗಾಧರೇಶ್ವರ ಸ್ವಾಮಿಯ ಗರ್ಭಗುಡಿಯನ್ನು ಇಂದು ಸಂಜೆ 5:02 ರಿಂದ 5:05 ಮಧ್ಯದಲ್ಲಿ 2 ನಿಮಿಷ ಹಾದು ಹೋಗಲಿದೆ. ಹಾಗಾಗಿ ದೇಗುಲದಲ್ಲಿ ಈಗಾಗಲೇ ವಿಶೇಷ ಪೂಜೆಗಳು ಆರಂಭವಾಗಿದ್ದು, ಶಿವನ ಲಿಂಗಕ್ಕೆ ಹಾಲು, ಎಳನೀರಿನ ಅಭಿಷೇಕಗಳನ್ನು ನಡೆಸಲಾಗುತ್ತಿದೆ.

ಗವಿಗಂಗಾಧರೇಶ್ವ ಸ್ವಾಮಿ ದೇಗುಲ 16ನೇ ಶತಮಾನದ ಕೆಂಪೇಗೌಡರ ಕಾಲದ್ದಾಗಿದ್ದು, ದೇಗುಲದಲ್ಲಿ ಸಾಕಷ್ಟು ಕೌತುಕಗಳು ಅಡಗಿವೆ ಎಂದು ಹೇಳಲಾಗುತ್ತದೆ.
ಮಕರ ಸಂಕ್ರಾಂತಿಯ ದಿನದಂದು ಸೂರ್ಯನ ಕಿರಣಗಳು ನಂದಿಯ ತಲೆಯ ಮಧ್ಯಭಾಗದ ಮೂಲಕ ಹಾದು ಗುಹೆಯೊಳಗಿರುವ ಶಿವಲಿಂಗದ ತಳಭಾಗವನ್ನು ಮೊದಲು ಸ್ಪರ್ಶಿಸುತ್ತದೆ. ನಂತರ ಸ್ವಲ್ಪ ಸ್ವಲ್ಪವಾಗಿ ಮೇಲೆ ಸಾಗುತ್ತ ಸುಮಾರು 1 ಗಂಟೆಗಳ ಕಾಲ ಗಂಗಾಧರೇಶ್ವರನಿಗೆ ಸೂರ್ಯಾಭಿಷೇಕ ಮಾಡುತ್ತದೆ.
ಇದನ್ನೂ ಓದಿ : ರಾಮನಗರ | ಕೆರೆಗೆ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ಸಾವು


















