ಬೆಂಗಳೂರು: ವರುಷದ ಮೊದಲ ಹಬ್ಬದ ಆಚರಣೆಗೆ ಕ್ಷಣಗಣನೆ ಶುವಾಗಿದ್ದು, ರಾಜ್ಯದೆಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಬೆಂಗಳೂರಲ್ಲಿ ಸಂಕ್ರಾಂತಿ ಹಬ್ಬದ ತಯಾರಿ ಬಲು ಜೋರಾಗಿದ್ದು, ಮಾರುಕಟ್ಟೆಗಳಲ್ಲಿ ಖರೀದಿಗೆ ಜನರು ಮುಗಿದಿದ್ದಾರೆ.
ಕೊಂಚ ಬೆಲೆ ಏರಿಕೆಯಾದರೂ ಹೂ-ಹಣ್ಣು, ಕಬ್ಬು, ಎಳ್ಳು-ಬೆಲ್ಲ ಖರೀದಿಯಲ್ಲಿ ಬೆಂಗಳೂರು ಮಂದಿ ಫುಲ್ ಬ್ಯೂಸಿಯಾಗಿದ್ದಾರೆ. ಹಬ್ಬದ ಪ್ರಯುಕ್ತ ಬೆಂಗಳೂರಿಗೆ ಚನ್ನಪಟ್ಟಣ, ಹೊಸಕೋಟೆ, ತಮಿಳುನಾಡಿನ ಕಬ್ಬುಗಳು ಬಂದಿಳಿದಿದೆ.
ಹಬ್ಬಕ್ಕೆ ಕಬ್ಬು- ಹೂವಿನ ದರ ಏಷ್ಟಿದೆ ಗೊತ್ತಾ?
ಮಲ್ಲಿಗೆ -1500-2000ರೂ. ಕೆಜಿಗೆ
ಕನಕಾಂಬರ-1500-1600ರೂ. ಕೆಜಿಗೆ
ಕಾಕಡ-500-600ರೂ. ಕೆಜಿಗೆ
ಸೇವಂತಿ-200ರೂ. ಕೆಜಿಗೆ
ಗುಲಾಬಿ-300ರೂ. ಕೆಜಿಗೆ
ಚಂಡು-50 ರಿಂದ 60ರೂ. ಕೆಜಿಗೆ
ಕಬ್ಬು ಜೋಡಿಗೆ 150 ರಿಂದ 250ರೂ.
ಎಳ್ಳು-ಬೆಲ್ಲ- 1ಕೆಜಿ 160ರಿಂದ 200ರೂ.
ಇದನ್ನೂ ಓದಿ; ಕೇಂದ್ರ ಸರ್ಕಾರಿ ನೌಕರರಿಗೆ ಸಂಕ್ರಾಂತಿ ಸಿಹಿ ಸುದ್ದಿ | ಸಿಗಲಿದೆ 22 ದಿನಗಳ ಬೋನಸ್



















