ರಾಜ್ಯ ಬಿಜೆಪಿ ಸಂಘಟನೆಯ ದೃಷ್ಟಿಯಿಂದ ರಾಜ್ಯದಲ್ಲಿ 39 ಸಂಘಟನಾತ್ಮಕ ಜಿಲ್ಲೆಗಳನ್ನು ರಚನೆ ಮಾಡಿಕೊಂಡಿದ್ದು, ಅದರಲ್ಲಿ 23 ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರ ನೇಮಕವನ್ನು ಮಾಡಿಕೊಂಡಿತ್ತು. 23 ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರನ್ನು ಚುನಾವಣಾಧಿಕಾರಿ ಗಣೇಶ್ ಕಾರ್ಣಿಕ್ ಘೋಷಿಸಿದ್ದು ಆಗಿದೆ. ಅದರಲ್ಲಿ ಚಿಕ್ಕಬಳ್ಳಾಪುರ ಸಂಘಟನಾತ್ಮಕ ಜಿಲ್ಲೆಗೆ ಸಂದೀಪ್ ರೆಡ್ಡಿ ಅವರನ್ನು ನೇಮಕ ಮಾಡಿ ಆದೇಶ ಮಾಡಲಾಗಿತ್ತು. ಈಗ ಆ ಆದೇಶವನ್ನು ಖುದ್ದು ಹೈಕಮಾಂಡ್ ನಾಯಕರ ಸೂಚನೆ ಮೇರೆಗೆ ತಡೆ ಹಿಡಿಯಲಾಗಿದೆ.
ಯಾವಾಗ ಜಿಲ್ಲಾಧ್ಯಕ್ಷ ಹುದ್ದೆಗೆ ನೇಮಕಗೊಂಡಿದ್ದ ಸಂದೀಪ್ ರೆಡ್ಡಿ ಅವರ ಆದೇಶವನ್ನು ತಡೆ ಹಿಡಿಯಲಾಯಿತೋ? ಅದಕ್ಕೆ ಬೇಸರಗೊಂಡ ಸಂದೀಪ್ ರೆಡ್ಡಿ ಮಾಧ್ಯಮಗಳ ಸಂಸದ ಡಾ.ಕೆ. ಸುಧಾಕರ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
“ಇಷ್ಟು ದಿನ ಒಂದು ಲೆಕ್ಕ. ಇನ್ಮೇಲೆ ಇನ್ನೊಂದು ಲೆಕ್ಕ. ಮುಗೀತು ನಿನ್ನದು ಎಲ್ಲ” ಇಷ್ಟು ದಿನಗಳ ಕಾಲ ಪಕ್ಷ ಬಿಟ್ಟು ಪಕ್ಷಕ್ಕೆ ಬಂದ ನಿನಗೆ ಎಲ್ಲಾ ಗೌರವ ಕೊಡುತ್ತಿದ್ವಿ. ಸೋತಾಗಲೂ ನಿನ್ನ ಬೆನ್ನಿಗೆ ನಿಂತಿದ್ವೀ. ಆದ್ರೆ ಇನ್ಮುಂದೆ ಹಾಗಲ್ಲ. ಇಷ್ಟು ದಿನವೇ ಒಂದು ಲೆಕ್ಕ. ಈಗ ಬೇರೆಯದ್ದೇ ಲೆಕ್ಕ. ನಿನ್ನ ಎಲ್ಲಾ ಕರ್ಮಕಾಂಡವನ್ನು ಬಯಲು ಮಾಡುತ್ತೇನೆ ಎಂದು ಸಂದೀಪ್ ರೆಡ್ಡಿ ಗುಡುಗಿದ್ದಾರೆ.
ಇನ್ನು ಸಂದೀಪ್ ರೆಡ್ಡಿ ಹೀಗೆ ಗುಡುಗಲು ಕಾರಣವು ಇದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧ್ಯಕ್ಷರ ಆಯ್ಕೆ ಆಗಿ ಆದೇಶ ಹೊರಬೀಳುತ್ತಿದ್ದಂತೆ, ಹಾಲಿ ಸಂಸದ ಡಾ.ಕೆ.ಸುಧಾಕರ್ ವಾಗ್ದಾಳಿ ನಡೆಸಿದ್ದರು. ಈ ಪ್ರಕ್ರಿಯೆ ನಾನು ಒಪ್ಪುವುದಿಲ್ಲ ಎಂದಿದ್ರು. ಸದ್ಯ ಅದೇ ಮಾದರಿಯಲ್ಲಿ ಆಯ್ಕೆಯನ್ನು ತಮ್ಮ ಆದ ಪ್ರಯತ್ನದ ಮೂಲಕ ಸುಧಾಕರ್ ತಡೆ ಹಿಡಿಸಿದ್ದಾರೆ. ಇದರಿಂದಾಗಿ ಸಂದೀಪ್ ರೆಡ್ಡಿ ಬೇಸರಗೊಂಡಿದ್ದು, ಸುಧಾಕರ್ ವಿರುದ್ಧ ಹರಿಹಾಯ್ದಿದಿದ್ದಾರೆ.