ಭಾರತೀಯ ಕ್ರಿಕೆಟ್ ತಂಡದ ಮಾಜಿ ಕೋಚ್ ಹಾಗೂ ಆಟಗಾರ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಭಾರತ ಅಂಡರ್-19 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಆಸ್ಟ್ರೇಲಿಯಾ ಕಿರಿಯರ ತಂಡದ ವಿರುದ್ಧದ ಸರಣಿಗಾಗಿ ಭಾರತ ಅಂಡರ್ 19 ತಂಡ ಪ್ರಕಟವಾಗಿದ್ದು, ಸಮಿತ್ ಆಯ್ಕೆಯಾಗಿದ್ದಾರೆ. ಏಕದಿನ ಹಾಗೂ ಟೆಸ್ಟ್ (4 ದಿನದಾಟ) ಸರಣಿಗಾಗಿ ಭಾರತೀಯ ಯುವ ತಂಡವನ್ನು ಪ್ರಕಟಿಸಲಾಗಿದೆ. ಸಮಿತ್ ಅಲ್ಲದೇ, ರಾಜ್ಯದ ಯುವ ಆಟಗಾರ ಕಾರ್ತಿಕೇಯ ಕೆಪಿ, ಸಮರ್ಥ್ ಎನ್ ಹಾಗೂ ಹಾರ್ದಿಕ್ ರಾಜ್ ಕೂಡ ಸ್ಥಾನ ಪಡೆದಿದ್ದಾರೆ.
15 ಸದಸ್ಯರ ಏಕದಿನ ತಂಡದ ನಾಯಕರಾಗಿ ಉತ್ತರ ಪ್ರದೇಶದ ಯುವ ಆಟಗಾರ ಮೊಹಮ್ಮದ್ ಅಮಾನ್ ಆಯ್ಕೆಯಾಗಿದ್ದಾರೆ. ಉಪನಾಯಕನಾಗಿ ಗುಜರಾತ್ನ ರುದ್ರ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ. ಟೆಸ್ಟ್ ತಂಡದ ನಾಯಕತ್ವವನ್ನು ಮಧ್ಯ ಪ್ರದೇಶದ ಸೋಹಮ್ ಪಟವರ್ಧನ್ ಗೆ ವಹಿಸಲಾಗಿದೆ. ಪಂಜಾಬ್ನ ವಿಹಾನ್ ಮಲ್ಹೋತ್ರಾ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.
ಭಾರತ ಅಂಡರ್ 19 ಏಕದಿನ ತಂಡ:
• ರುದ್ರ ಪಟೇಲ್ (ಗುಜರಾತ್)
• ಸಾಹಿಲ್ ಪರಾಖ್ (ಮಹಾರಾಷ್ಟ್ರ)
• ಕಾರ್ತಿಕೇಯ ಕೆಪಿ (ಕರ್ನಾಟಕ)
• ಮೊಹಮ್ಮದ್ ಅಮಾನ್- ನಾಯಕ (ಉತ್ತರ ಪ್ರದೇಶ)
• ಕಿರಣ್ ಚೋರ್ಮಲೆ (ಮಹಾರಾಷ್ಟ್ರ)
• ಅಭಿಗ್ಯಾನ್ ಕುಂದು- ವಿಕೆಟ್ ಕೀಪರ್ (ಮುಂಬೈ)
• ಹರ್ವಂಶ್ ಸಿಂಗ್ ಪಂಗಾಲಿಯಾ- ವಿಕೆಟ್ ಕೀಪರ್ (ಸೌರಾಷ್ಟ್ರ)
• ಸಮಿತ್ ದ್ರಾವಿಡ್ (ಕರ್ನಾಟಕ)
• ಯುಧಾಜಿತ್ ಗುಹಾ (ಪಶ್ಚಿಮ ಬಂಗಾಳ)
• ಸಮರ್ಥ ಎನ್ (ಕರ್ನಾಟಕ)
• ನಿಖಿಲ್ ಕುಮಾರ್ (ಚಂಡೀಗಢ)
• ಚೇತನ್ ಶರ್ಮಾ (ರಾಜಸ್ಥಾನ್)
• ಹಾರ್ದಿಕ್ ರಾಜ್ (ಕರ್ನಾಟಕ)
• ರೋಹಿತ್ ರಾಜಾವತ್ (ಮಧ್ಯ ಪ್ರದೇಶ)
• ಮೊಹಮ್ಮದ್ ಇನಾನ್ (ಕೇರಳ) ಸ್ಥಾನ ಪಡೆದಿದ್ದಾರೆ.
ಭಾರತ ಅಂಡರ್ 19 ಟೆಸ್ಟ್ (4 ದಿನದಾಟ) ತಂಡ:
• ವೈಭವ್ ಸೂರ್ಯವಂಶಿ (ಬಿಹಾರ)
• ನಿತ್ಯ ಪಾಂಡ್ಯ (ಬಿಹಾರ)
• ವಿಹಾನ್ ಮಲ್ಹೋತ್ರಾ (ಪಂಜಾಬ್)
• ಸೋಹಮ್ ಪಟವರ್ಧನ್- ನಾಯಕ (ಮಧ್ಯ ಪ್ರದೇಶ)
• ಕಾರ್ತಿಕೇಯ ಕೆಪಿ (ಕರ್ನಾಟಕ)
• ಸಮಿತ್ ದ್ರಾವಿಡ್ (ಕರ್ನಾಟಕ)
• ಅಭಿಗ್ಯಾನ್ ಕುಂದು- ವಿಕೆಟ್ ಕೋಪರ್ (ಮುಂಬೈ)
• ಹರ್ವಂಶ್ ಸಿಂಗ್ ಪಂಗಾಲಿಯಾ- ವಿಕೆಟ್ ಕೀಪರ್ (ಸೌರಾಷ್ಟ್ರ)
• ಚೇತನ್ ಶರ್ಮಾ (ರಾಜಸ್ಥಾನ್),
• ಸಮರ್ಥ್ ಎನ್ (ಕರ್ನಾಟಕ)
• ಆದಿತ್ಯ ರಾವತ್ (ಉತ್ತರಾಖಂಡ್)
• ನಿಖಿಲ್ ಕುಮಾರ್ (ಚಂಡೀಗಢ್)
• ಅನ್ಮೋಲ್ಜೀತ್ ಸಿಂಗ್ (ಪಂಜಾಬ್)
• ಆದಿತ್ಯ ಸಿಂಗ್ (ಉತ್ತರ ಪ್ರದೇಶ)
• ಮೊಹಮ್ಮದ್ ಇನಾನ್ (ಕೇರಳ) ಸ್ಥಾನ ಪಡೆದಿದ್ದಾರೆ.