ಹುಬ್ಬಳ್ಳಿ : ಸೇಲ್ಸ್ ಗರ್ಲ್‌ವೊಬ್ಬಳು 49 ಗ್ರಾಂ ಚಿನ್ನದ ಸರ ಕಳುವು ಮಾಡಿರುವ ಘಟನೆ ಹುಬ್ಬಳ್ಳಿಯ ಸರ್‌ಸಿದ್ದಪ್ಪ ಕಂಬಳಿ ರಸ್ತೆಯ ತನಿಷ್ಠಾ ಜ್ಯುವೆಲರ್ಸ್ ಅಂಗಡಿಯಲ್ಲಿ ನಡೆದಿದೆ.
ಪ್ರಶಾಂತಿ ಕಾಲೋನಿಯ ಮೇರಿ ಎಂಬಾಕೆ ಅಂದಾಜು 5.60 ಲಕ್ಷ ರೂ. ಮೌಲ್ಯದ 49ಗ್ರಾಂ ಚಿನ್ನದ ಸರ ಕಳ್ಳತನ ಮಾಡಿರುವ ಆರೋಪ ಕೇಳಿ ಬಂದಿದೆ.
ಕೌಂಟರ್‌ನಲ್ಲಿ ನಕಲಿ ಚಿನ್ನದ ಸರವಿಟ್ಟು ಅಸಲಿ ಸರ ಕದ್ದಿದ್ದಾರೆ ಎಂದು ಮಳಿಗೆಯ ಮಾಲೀಕ ನಿಖಿಲ ಎಂಬುವವರು ದೂರು ದಾಖಲಿಸಿದ್ದಾರೆ. ಈ ಘಟನಾ ಸಂಬಂಧ ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ | ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದ BEO ಕಾರ್.. ತಪ್ಪಿದ ಭಾರೀ ಅನಾಹುತ!



















