ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ರನ್ನು ಕುಟುಂಬಸ್ಥರೊಂದಿಗೆ ಆತ್ಮೀಯ ಸ್ನೇಹಿತರು ನೋಡಲು ಬರುತ್ತಿದ್ದಾರೆ. ಇಂದು ಕೂಡ ಸಾಧು ಕೋಕಿಲಾ ಬಂದು ಮರಳಿ ಹೋಗಿದ್ದಾರೆ.
ದರ್ಶನ್ ರನ್ನು ನಿನ್ನೆಯಷ್ಟೇ ಅವರ ಪತ್ನಿ, ಸಹೋದರ ಹಾಗೂ ವಿನೋದ್ ರಾಜ್ ನೋಡಲು ಬಂದಿದ್ದರು. ಈಗ ಪ್ರತಿದಿನ ಅವರನ್ನು ಕಾಣಲು ಕೆಲವು ಗೆಳೆಯರು, ಆಪ್ತರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡುತ್ತಿದ್ದಾರೆ. ಆದರೆ, ತೀರಾ ಆತ್ಮೀಯರನ್ನಷ್ಟೆ ನಟ ದರ್ಶನ್ ಜೈಲಿನಲ್ಲಿ ಭೇಟಿಯಾಗುತ್ತಿದ್ದಾರೆ.
ಇಂದು ಕಾಮಿಡಿ ಸ್ಟಾರ್ ಸಾಧು ಕೋಕಿಲ ತಮ್ಮ ಗೆಳೆಯನನ್ನು ಕಾಣಲು ಜೈಲಿಗೆ ಬಂದಿದ್ದರು. ಆದರೆ ದರ್ಶನ್ರ ಭೇಟಿಗೆ ಸಾಧುಕೋಕಿಲಗೆ ಅವಕಾಶ ಸಿಗದ ಕಾರಣ ಬೇಸರದಿಂದಲೇ ಮರಳಿ ಹೋಗಿದ್ದಾರೆ.
