ಬೆಂಗಳೂರು: ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಖಾಸಗಿ ಬಸ್ ಟಿಕೆಟ್ ದರಗಳು ಭಾರೀ ಏರಿಕೆ ಕಂಡುಬಂದಿದೆ. ನಾಲ್ಕನೇ ಶನಿವಾರ, ಭಾನುವಾರ ಹಾಗೂ ಗಣರಾಜ್ಯೋತ್ಸವದ ಕಾರಣ ಮೂರು ದಿನಗಳ ನಿರಂತರ ರಜೆ ಸಿಕ್ಕಿರುವುದರಿಂದ, ಬಹುತೇಕ ಬೆಂಗಳೂರು ಮಂದಿ ಇಂದು ತಮ್ಮ ಊರಿನತ್ತ ಮುಖಮಾಡಿದ್ದಾರೆ. ಇದರ ಪರಿಣಾಮವಾಗಿ ಬಸ್ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.

ರಜೆ ಹಿನ್ನಲೆಯಲ್ಲಿ ಪ್ರಯಾಣ ಬೇಡಿಕೆ ಹೆಚ್ಚಾದಂತೆ ಖಾಸಗಿ ಬಸ್ ಆಪರೇಟರ್‌ಗಳು ಟಿಕೆಟ್ ದರವನ್ನು ಹೆಚ್ಚಿಸಿದ್ದಾರೆ ಎನ್ಸಾನಲಾಗಿದೆ. ದಿನಗಳಲ್ಲಿ 800 ರಿಂದ 1300 ರೂಪಾಯಿಗಳೊಳಗೆ ಲಭ್ಯವಾಗುತ್ತಿದ್ದ ಟಿಕೆಟ್ ದರ, ಇದೀಗ 1000 ದಿಂದ 2500 ರೂಪಾಯಿಗಳವರೆಗೂ ಏರಿಕೆಯಾಗಿದೆ. ಬಹುತೇಕ ಮಾರ್ಗಗಳಲ್ಲಿ ಬಸ್‌ಗಳು ಮುಂಗಡವಾಗಿಯೇ ಫುಲ್ ಬುಕ್ ಆಗುತ್ತಿರುವುದು ಕಂಡುಬರುತ್ತಿದೆ.

ಹಬ್ಬ ಅಥವಾ ರಜೆ ಸಂದರ್ಭಗಳಲ್ಲಿ ಊರಿಗೆ ತೆರಳುವುದು ಅನಿವಾರ್ಯವಾಗಿರುವ ಕಾರಣ, ಹೆಚ್ಚಿದ ದರದ ನಡುವೆಯೂ ಪ್ರಯಾಣಿಕರು ಟಿಕೆಟ್ ಬುಕ್ ಮಾಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಬಸ್‌ಗಳ ಅತಿರೇಕದ ದರ ವಸೂಲಿಗೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಸುದ್ದಿಯಾದ ಐಟಿ ಸಿಟಿ… ವಿಶ್ವದ ಅತ್ಯಧಿಕ ಟ್ರಾಫಿಕ್ ಇರುವ ನಗರಗಳಲ್ಲಿ ಬೆಂಗಳೂರು 2ನೇ ಸ್ಥಾನ..!



















