ಬೆಂಗಳೂರು: ಕಾಲ ಈಗ ಬದಲಾಗಿದೆ. ಹಣದುಬ್ಬರ ಜಾಸ್ತಿಯಾಗುತ್ತಲೇ ಇದೆ. ಹಣದುಬ್ಬರ, ಬೇಡಿಕೆಗೆ ತಕ್ಕಂತೆ ಆರೋಗ್ಯ ವಿಮೆ, ಜೀವ ವಿಮೆಗಳ ಪ್ರೀಮಿಯಂಗಳು ಕೂಡ ತುಟ್ಟಿಯಾಗಿವೆ. ಅದರಲ್ಲೂ, 10-15 ಲಕ್ಷ ರೂಪಾಯಿ ಕವರ್ ಇರುವ ಆರೋಗ್ಯ ವಿಮೆಗಳ ಪ್ರೀಮಿಯಂ ಅಂತೂ ಗಗನಕ್ಕೇರಿದೆ. ಆದರೆ, ಬಡವರು, ಮಧ್ಯಮ ವರ್ಗದವರು ಚಿಂತೆ ಮಾಡಬೇಕಿಲ್ಲ. ವರ್ಷಕ್ಕೆ ಕೇವಲ 899 ರೂಪಾಯಿ ಪ್ರೀಮಿಯಂ ಪಾವತಿಸಿದರೂ ಸಾಕು, ನಿಮಗೆ 15 ಲಕ್ಷ ರೂಪಾಯಿ ಕವರೇಜ್ ಇರುವ ಆರೋಗ್ಯ ವಿಮೆ ಸಿಗುತ್ತದೆ.
ಹೌದು, ಭಾರತೀಯ ಅಂಚೆ ಇಲಾಖೆಯ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿನಿಂದ ಇಂತಹದ್ದೊಂದು ವಿಮಾ ಯೋಜನೆ ಇದೆ. ಕೇಂದ್ರ ಸರ್ಕಾರದ ಗ್ಯಾರಂಟಿ ಇರುವ ಪಾಲಿಸಿಯನ್ನು ವರ್ಷಕ್ಕೆ 899 ರೂಪಾಯಿ ಪಾವತಿಸಿ ಖರೀದಿಸಬಹುದಾಗಿದೆ. ಇದು 15 ಲಕ್ಷ ರೂಪಾಯಿವರೆಗೆ ಕವರೇಜ್ ನೀಡುತ್ತದೆ.
ಮನೆಯಲ್ಲಿ ಗಂಡ-ಹೆಂಡತಿಗೆ ಅನ್ವಯವಾಗುವಂತೆ ಪಾಲಿಸಿ ಖರೀದಿಸಿದರೆ ಪ್ರೀಮಿಯಂ ಮೊತ್ತ 1,399 ರೂಪಾಯಿ ಆಗುತ್ತದೆ. ಗಂಡ-ಹೆಂಡತಿ, ತಂದೆ-ತಾಯಿಗೆ ಆದರೆ 1,799 ರೂಪಾಯಿ ಪ್ರೀಮಿಯಂ ಕಟ್ಟಬೇಕಾಗುತ್ತದೆ. ಈ ವಿಮೆ ಖರೀದಿಸಿದರೆ ಐದು ಲಕ್ಷ ರೂಪಾಯಿವರೆಗೆ ಕ್ಯಾಶ್ ಲೆಸ್ ಆಗಿ ಟ್ರೀಟ್ ಮೆಂಟ್ ತೆಗೆದುಕೊಳ್ಳಬಹುದಾಗಿದೆ.
ಅಂಚೆ ಕಚೇರಿಯಲ್ಲಿ ಬ್ಯಾಂಕ್ ಖಾತೆ ಹೊಂದಿದವರು ಪಾಲಿಸಿಯನ್ನು ಖರೀದಿಸಬಹುದು. 18 ರಿಂದ 60 ವರ್ಷ ವಯಸ್ಸಿನ ಭಾರತದ ನಾಗರಿಕರು ಪಾಲಿಸಿಯನ್ನು ಖರೀದಿಸಬಹುದು. ಹುಟ್ಟಿ 91 ದಿನ ಆದ ಮಕ್ಕಳಿಗೂ ಪಾಲಿಸಿ ಮಾಡಿಸಬಹುದು. ಬೇರೆ ವಿಮೆ ಮಾಡಿಸಿದವರೂ ಈ ಯೋಜನೆಗೆ ಸೇರಬಹುದು. ಆದರೆ, ಗಂಭೀರ ಕಾಯಿಲೆ ಇರುವವರು ಈ ಪಾಲಿಸಿ ಪಡೆಯಲು ಸಾಧ್ಯವಾಗುವುದಿಲ್ಲ. ಹೆಚ್ಚಿನ ಮಾಹಿತಿಗೆ ಸಮೀಪದ ಅಂಚೆ ಕಚೇರಿಗೆ ಬೇಟಿ ನೀಡಬಹುದು.
ಗಮನಿಸಿ: ನಾವು ಆರೋಗ್ಯ ವಿಮೆಯ ಕುರಿತು ಮಾಹಿತಿ ನೀಡುವ ದೃಷ್ಟಿಯಿಂದ ಈ ಲೇಖನವನ್ನು ಪ್ರಕಟಿಸಿದ್ದೇವೆ. ಇದನ್ನು ಶಿಫಾರಸು ಎಂದು ತಿಳಿಯಬಾರದು. ಯಾವುದೇ ಇನ್ಶೂರೆನ್ಸ್ ಪಡೆಯುವ ಮುನ್ನ ತಜ್ಞರು, ಪರಿಣತರನ್ನು ಸಂಪರ್ಕಿಸುವುದು ಒಳಿತು



















