ಬೆಂಗಳೂರು ಗ್ರಾಮಾಂತರ: ಸಾಲು ಸಾಲು ರಜೆಗಳ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಸ್ ನಿಲ್ದಾಣದಲ್ಲಿ ಬಸ್ ನಿಲ್ದಾಣಗಳು ಜನರಿಂದ ಕಿಕ್ಕಿರಿದು ತುಂಬಿದ್ದು, ಬಸ್ ಹತ್ತಲು ಪ್ರಯಾಣಿಕರು ಪರದಾಡುತ್ತಿದ್ದಾರೆ.
ಹೊಸಕೋಟೆ ನಗರ ಬಸ್ ನಿಲ್ದಾಣದಲ್ಲಿ ಜನಸಾಗರ ಸೇರಿದ್ದು, ಬಸ್ಸಿನಲ್ಲಿ ಸೀಟು ಪಡೆಯಲು ಪ್ರಯಾಣಿಕರು ನೂಕುನುಗ್ಗಲು ಮಾಡುತ್ತಿದ್ದಾರೆ. ಸರದಿ ಸಾಲಿನಲ್ಲಿ ಬಸ್ ಹತ್ತಲು ಸಾರ್ವಜನಿಕರು ಹರಸಾಹಸ ಪಡುತ್ತಿದ್ದಾರೆ. ಕೋಲಾರ, ಕೆಜಿಎಫ್, ಬಂಗಾರಪೇಟೆ ಹಾಗೂ ಆಂಧ್ರ ಪ್ರದೇಶದ ಕಡೆಗೆ ಸಂಚರಿಸುವ ಕಡೆ ಹೆಚ್ಚಾಗಿ ಜನಸಂಖ್ಯೆ ಕಂಡುಬಂದಿದ್ದು, ಬಸ್ಸು ಕಂಡ ತಕ್ಷಣ ಪ್ರಯಾಣಿಕರು ಎದ್ನೋ-ಬಿದ್ನೋ ಎಂದು ಓಡುತ್ತಿದ್ದಾರೆ.
ಇದರಿಂದ ಹಿರಿಯ ನಾಗರಿಕರಿಗೆ ಬಸ್ಸು ಹತ್ತಲು ಹೆಚ್ಚಿನ ತೊಂದರೆ ಎದುರಾಗಿದ್ದು, ಮಕ್ಕಳನ್ನು ಹಿಡಿದು ಬಸ್ಸು ಹತ್ತುವ ಮಹಿಳೆಯರು ಸುಸ್ತಾಗುತ್ತಿದ್ದಾರೆ.
ಇದನ್ನೂ ಓದಿ : ಕೋಲಾರ | ಗ್ರಾಮ ಪಂಚಾಯಿತಿ ಸಿಬ್ಬಂದಿಯಿಂದಲೇ ಮತಾಂತರ ಯತ್ನ ಆರೋಪ



















