ಬೆಂಗಳೂರು: ಮಾಜಿ ಭಾರತ ಕ್ರಿಕೆಟ್ ಆಟಗಾರ ಯೋಗ್ರಾಜ್ ಸಿಂಗ್ ಅವರು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ನಿವೃತ್ತಿ ಕುರಿತು ಮಾತನಾಡಿದ್ದಾರೆ. ಅವರಿಬ್ಬರಿಗೆ ಯಾವುದೇ ಕಾರಣಕ್ಕೆ ವಿದಾಯ ಹೇಳಿ ಎಂದು ಒತ್ತಾಯ ಮಾಡುವಂತಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರೋಹಿತ್ ಶರ್ಮಾ ಐಸಿಸಿ ಚಾಂಪಿಯನ್ಸ್ ಟ್ರೋಪಿ ಮುಕ್ತಾಯಗೊಂಡು ಬಳಿಕ ತಾವು ನಿವೃತ್ತಿ ಪಡೆಯುವುದಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಯನ್ನುಯೋಗರಾಜ್ ಸಿಂಗ್ ಬೆಂಬಲಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಗೆದ್ದ ಕ್ಯಾಪ್ಟನ್ ರೋಹಿತ್, ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಹೇಳಿದ್ದರು.
ಯೋಗರಾಜ್ ಸಿಂಗ್ ಎಎನ್ಐ ಮಾತನಾಡಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ 2027ರ ಏಕದಿನ ವಿಶ್ವಕಪ್ ಮೇಲೆ ಗಮನ ಹರಿಸಬೇಕು. ಆ ಟೂರ್ನಮೆಂಟ್ ಗೆಲ್ಲುವುದು ಹೇಗೆ ಎಂಬುದರ ಮೇಲೆ ಗಮನ ಕೇಂದ್ರೀಕರಿಸಬೇಕು ಎಂದು ಹೇಳಿದ್ದಾರೆ.
ICC ಟೂರ್ನಮೆಂಟ್ಗಳಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ಅದ್ಭುತ ಪ್ರದರ್ಶನ ನೀಡಿದೆ. T20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಎರಡನ್ನೂ ಯಾವುದೇ ಪಂದ್ಯವನ್ನು ಸೋಲದೇ ತನ್ನದಾಗಿಸಿಕೊಂಡಿದೆ. 2023 ODI ವಿಶ್ವಕಪ್ನಲ್ಲಿ ಭಾರತ ಒಂದೇ ಪಂದ್ಯವನ್ನು ಸೋಲದೆ ಫೈನಲ್ಗೆ ಪ್ರವೇಶ ಪಡೆದಿದ್ದರೂ ನವೆಂಬರ್ 19ರಂದು ಆಸ್ಟ್ರೇಲಿಯಾ ತಂಡಕ್ಕೆ ಮಣಿದಿತ್ತು.
“ರೋಹಿತ್ ಶರ್ಮಾ ನಿವೃತ್ತಿ ಹೊಂದುತ್ತಿಲ್ಲ ಎಂದು ಹೇಳಿದ್ದು ಚೆನ್ನಾಗಿದೆ. ಯಾರೂ ರೋಹಿತ್ ಮತ್ತು ವಿರಾಟ್ ಅವರನ್ನು ನಿವೃತ್ತಿ ಹೊಂದಲು ಬಿಡಬಾರದು. ಅವರು 2027 ಏಕದಿನ ವಿಶ್ವಕಪ್ ಗೆದ್ದ ನಂತರ ನಿವೃತ್ತಿಯ ಬಗ್ಗೆ ಯೋಚಿಸಬೇಕು. ನಾನು ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾರತವೇ ಗೆಲ್ಲುತ್ತದೆ ಎಂದು ಹೇಳಿದ್ದೆ. ಅದರು ಸರಿಯಾಗಿದೆ ಎಂದು ಹೇಳಿದರು,” ಎಂದು ಯೋಗ್ರಾಜ್ ANIಗೆ ತಿಳಿಸಿದರು.
ಫಿಟ್ನೆಸ್ ಬಗ್ಗೆ ಮಾತು
ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್, ಭಾರತ ತಂಡದ ಫಿಟ್ನೆಸ್ ಸಮಸ್ಯೆಯ ವಿವಾದದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ರೋಹಿತ್ ಅವರನ್ನು ಕಾಂಗ್ರೆಸ್ ನಾಯಕಿ ಶಮಾ ಮೊಹಮ್ಮದ್, ದಪ್ಪ ದೇಹದವರು ಎಂದು ಟ್ರೋಲ್ ಮಾಡಿದ್ದರು. ಅದನ್ನು ಖಂಡಿಸಿದ ಯೋಗರಾಜ್ ಸಿಂಗ್, ರೋಹಿತ್ ಫಿಟ್ನೆಸ್ ಬಗ್ಗೆ ಪ್ರಶ್ನಿಸುವ ಮೊದಲು ಶಮಾ ಮೊಹಮ್ಮದ್ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಬೇಕು ಎಂದು ಹೇಳಿದ್ದಾರೆ.
“ಕೆಲವರು ರೋಹಿತ್ ಶರ್ಮಾ ಅವರ ಫಿಟ್ನೆಸ್ ಬಗ್ಗೆ ಪ್ರಶ್ನಿಸುತ್ತಿದ್ದರು. ನಾನು ಅವರ ಫಿಟ್ನೆಸ್ ಬಗ್ಗೆ ಕೇಳುತ್ತೇನೆ/. ಆಟಗಾರರ ಬಗ್ಗೆ ಕಾಮೆಂಟ್ ಮಾಡುವುದು ರಾಜಕಾರಣಿಗಳಿಗೆ ತಕ್ಕುದಲ್ಲ,” ಎಂದು ಯೋಗ್ರಾಜ್ ತಮ್ಮ ಮಾತನ್ನು ಮುಕ್ತಾಯಗೊಳಿಸಿದರು.
ರೋಹಿತ್ ಶರ್ಮಾ ಒಡಿಐ ಕ್ರಿಕೆಟ್ನಿಂದ ನಿವೃತ್ತಿ ಹೊಂದಲು ಹೊರಟಿಲ್ಲ ಎಂದು ದೃಢಪಡಿಸಿದ್ದರೂ, ಮುಂದಿನ ಐಸಿಸಿ ಏಕದಿನ ವಿಶ್ವಜಪ್ ಟೂರ್ನಮೆಂಟ್ ಬಗ್ಗೆ ಖಚಿತವಾಗಿ ಹೇಳಲಿಲ್ಲ.