ನವದೆಹಲಿ : ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಒಂದು ಅರ್ಧಶತಕ ಹಾಗೂ ಅಜೇಯ ಶತಕದ ಇನ್ನಿಂಗ್ಸ್ ಆಡಿದ ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ, ಐಸಿಸಿ ಇಂದು ಬಿಡುಗಡೆ ಮಾಡಿರುವ ಏಕದಿನ ಬ್ಯಾಟ್ಸ್ಮನ್ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಪ್ರಸ್ತುತ 781 ರೇಟಿಂಗ್ ಪಾಯಿಂಟ್ಗಳನ್ನು ಹೊಂದಿರುವ ರೋಹಿತ್, ಹಾಲಿ ಏಕದಿನ ನಾಯಕ ಶುಭ್ಮನ್ ಗಿಲ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.
ಈ ಮೂಲಕ 38ನೇ ವಯಸ್ಸಿನಲ್ಲಿ ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೇರಿದ ಅತ್ಯಂತ ಹಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ. ಹಾಗೆಯೇ ತಮ್ಮ 18 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ರೋಹಿತ್ ಶರ್ಮಾ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ. ಇನ್ನು ಇದೇ ವೇಳೆ 5ನೇ ಸ್ಥಾನದಲ್ಲಿದ್ದ ಕೊಹ್ಲಿ 6ನೇ ಸ್ಥಾನಕ್ಕೆ ಕುಸಿದಿರೋದು ಅಭಿಮಾನಿಗಳಿಗೆ ಬೇಸರ ತರಿಸಿದೆ.
ಟಾಪ್-5ನಲ್ಲಿ ಇಬ್ಬರು ಇಂಡಿಯನ್ಸ್ | ನೂತನವಾಗಿ ಬಿಡುಗಡೆಯಾದ ಏಕದಿನ ರ‍್ಯಾಂಕಿಗ್‌ನಲ್ಲಿ 781 ಅಂಕಗಳೊಂದಿಗೆ ಹಿಟ್‌ಮ್ಯಾನ್ ಅಗ್ರಸ್ಥಾನದಲ್ಲಿದ್ದಾರೆ. ಅಫ್ಘಾನ್‌ನ ಇಬ್ರಾಹಿಂ ಜದ್ರಾನ್ 764, ಶುಭಮನ್ ಗಿಲ್ 745 ಅಂಕ, ಪಾಕ್‌ನ ಬಾಬರ್ ಆಜಂ 739 ಅಂಕ, ಕಿವೀಸ್‌ನ ಡೇರಿಲ್ ಮಿಚೆಲ್ 734 ಅಂಕಗಳೊಂದಿಗೆ ಕ್ರಮವಾಗಿ 2,3,4,5ನೇ ಸ್ಥಾನಗಳಲ್ಲಿದ್ದಾರೆ.
ಇದನ್ನೂ ಓದಿ : ಬಿಗ್‌ಬಾಸ್ | ಅಡುಗೆ ಸರಿಯಿಲ್ಲ ಎಂದು ನನ್ನ ತಾಯಿಗೆ ಎಂದಿಗೂ ದೂಶಿಸಲ್ಲ; ಕಣ್ಣಿರಿಟ್ಟ ರಕ್ಷಿತಾ ಶೆಟ್ಟಿ



















