ಖದೀಮರು ಗನ್ ಹಿಡಿದು ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿ ರಾಬರಿ ಮಾಡಿದ್ದಾರೆ. ಜ್ಯುವಲ್ಲರಿ ಶಾಪ್ ಕ್ಲೋಸ್ ಮಾಡುವ ವೇಳೆ ಗನ್ ಹಿಡಿದು ಎಂಟ್ರಿ ಕೊಟ್ಟ ಮುಸುಕುದಾರಿಗಳು ಸಿಬ್ಬಂದಿ ಎದುರಿಸಿ ಚಿನ್ನದ ಅಂಗಡಿಯನ್ನು ದೋಚಿ ಎಸ್ಕೇಪ್ ಆಗಿದ್ದಾರೆ.
ಮಾಗಡಿ ರಸ್ತೆಯ ಮಾಚೋಹಳ್ಳಿ ಗೇಟ್ ಬಳಿ ನಡೆದಿರುವ ಘಟನೆಗೆ ಜನರು ಬೆಚ್ಚಿಬಿದ್ದಾರೆ. ಭೈರವೇಶ್ವರ ಕಾಂಪ್ಲೆಕ್ಸ್‌ನಲ್ಲಿರುವ ರಾಮ್ ಜ್ಯುವೆಲ್ಲರ್ಸ್ಗೆ ಬಂದ ಮೂವರು ಕಳ್ಳರು ಕನ್ನಯ್ಯಲಾಲ್ ಮತ್ತು ಸಿಬ್ಬಂದಿ ತಳ್ಳಿ ಚಿನ್ನಾಭರಣ ದೋಚಿದ್ದಾರೆ. ಈ ವೇಳೆ ಕನ್ನಯ್ಯಲಾಲ್ ಸಹಾಯಕ್ಕಾಗಿ ಕೂಗಿದ್ದು. ಆದರೆ ಅಕ್ಕಪಕ್ಕದ ಅಂಗಡಿಯವರು ಬರುವ ವೇಳೆಗೆ ಖದೀಮರು ಎಸ್ಕೇಪ್ ಆಗಿದ್ದಾರೆ. ಕಳ್ಳರ ಕರಾಮತ್ತು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.