‘ಕಾಂತಾರ-1’ ಚಿತ್ರ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಸಾವಿರ ಕೋಟಿ ಕಲೆಕ್ಷನ್ ಗಡಿ ತಲುಪುವ ದಾರಿಯಲ್ಲಿದೆ. ದಸರಾದಿಂದ ದೀಪಾವಳಿವರೆಗೂ ಬಿರುಸಿನ ಪ್ರಚಾರದಲ್ಲಿ ಭಾಗಿಯಾಗಿದ್ದ ರಿಷಬ್ ಶೆಟ್ಟಿ ಹಾಗೂ ಪತ್ನಿ ಪ್ರಗತಿ ಶೆಟ್ಟಿ ಇದೀಗ ವೈಯಕ್ತಿಕ ಸಂಭ್ರಮಕ್ಕೆ ದೀಪಾವಳಿ ಹಬ್ಬದ ದಿನ ಬ್ರೇಕ್ ತೆಗೆದುಕೊಂಡಿದ್ದಾರೆ.

ಕುಂದಾಪುರದ ಕೆರಾಡಿಯ ತಮ್ಮ ನಿವಾಸದಲ್ಲಿ ರಿಷಬ್ ಶೆಟ್ಟಿ ಅದ್ದೂರಿಯಾಗಿ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಕರಾವಳಿ ಭಾಗದಲ್ಲಿ ದೀಪಾವಳಿ ಹಬ್ಬಕ್ಕೆ ಆಯುಧ ಪೂಜೆ ಮಾಡುವ ಪದ್ಧತಿ ಇದೆ. ಅದರಂತೆ ಮನೆಯ ಅಂಗಳದಲ್ಲಿ ಸಾಲು ಸಾಲು ವಾಹನಗಳನ್ನ ಇಟ್ಟು ರಿಷಬ್ ಶೆಟ್ಟಿ ದಂಪತಿ ಪೂಜೆ ಮಾಡಿದ್ದಾರೆ. ತುಳಸಿಕಟ್ಟೆಗೆ ಪೂಜೆ ಸೇರಿದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಮಕ್ಕಳ ಜೊತೆ ಸಮಯ ಕಳೆದಿದ್ದಾರೆ.
ʼಬೆಳಕಿನ ಈ ಹಬ್ಬ ಪ್ರೀತಿ ಹಂಚುವ ಸುಂದರ ಕ್ಷಣಗಳು’ ಎಂಬ ಸಾಲಿನೊಂದಿಗೆ ಆ ಫೋಟೋಗಳನ್ನು ಇದೀಗ ರಿಷಬ್ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಸಂಭ್ರಮ ವ್ಯಕ್ತಪಡಿಸಿದ್ದಾರೆ.


















