ಶಿವಮೊಗ್ಗ : ಟು ವ್ಹೀಲರ್ ಬೈಕ್ ನಲ್ಲಿ ವ್ಹೀಲಿಂಗ್ ಮಾಡಬೇಡ ಎಂದು ಅನ್ಯಕೋಮಿನ ಯುವಕರ ಗುಂಪಿನಿಂದ ಯುವಕನ ಮೇಲೆ ಹಲ್ಲೆ ನಡೆದಿದೆ.
ಹಾಕಿ ಸ್ಟಿಕ್ ಮತ್ತು ಬ್ಯಾಟ್ ನಿಂದ ಪುಂಡರ ಗುಂಪು ಹಲ್ಲೆ ನಡೆಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಕುವೆಂಪು ಬಡಾವಣೆಯಲ್ಲಿ ಹಾಡಹಗಲೇ ನಡೆದಿದೆ. ನಿವೃತ್ತ ಪಿಎಸ್ಐ ಬಸವರಾಜ್ ಪುತ್ರ ಅವಿನಾಶ್ ಹಲ್ಲೆಗೊಳಗಾದ ಯುವಕ. ರಾಗಿಗುಡ್ಡದ ವಾಸಿ ಫಾಜೀಲ್ ಮತ್ತು ಸ್ನೇಹಿತರಿಂದ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ. ಹಲ್ಲೆ ನಡೆಸಿರುವ ಪರಿಣಾಮ ಅವಿನಾಶ್ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಮೆಗ್ಗಾನ್ ಆಸ್ಪತ್ರೆಯಲ್ಲಿ ಸದ್ಯ ಅವಿನಾಶ್ ಚಿಕಿತ್ಸೆ ಪಡೆಯುತ್ತಿದ್ದು, ಎಸ್ಪಿ ಮಿಥುನ್ ಕುಮಾರ್ ಕುಟುಂಬಸ್ಥರನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕಿದ್ದಾರೆ. ಶೀಘ್ರದಲ್ಲೆ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ಧಾರೆ..