ಬೆಂಗಳೂರು: ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದ್ದು, ನ. 23ರಂದು ಫಲಿತಾಂಶ ಹೊರ ಬೀಳಲಿದೆ. ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ – ಜೆಡಿಎಸ್ ಮೈತ್ರಿಗೆ ಇದು ಪ್ರತಿಷ್ಠೆಯಾಗಿದೆ.
ಸದ್ಯದ ಸಮೀಕ್ಷೆಗಳಂತೆ ಚನ್ನಪಟ್ಟಣ ಹಾಗೂ ಶಿಗ್ಗಾಂವಿಯಲ್ಲಿ ಬಿಜೆಪಿ ಮೈತ್ರಿ ಗೆಲುವು ಸಾಧಿಸಿದರೆ, ಸಂಡೂರಿನಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಗೆಲ್ಲಬಹುದು ಎನ್ನಲಾಗುತ್ತಿದೆ. ಆದರೆ, ನಾಯಕರು ಮಾತ್ರ ಬೇರೆ ಬೇರೆ ಲೆಕ್ಕಾಚಾರದಲ್ಲೇ ಇದ್ದಾರೆ.
ಆಡಳಿತರೂಢ ಕಾಂಗ್ರೆಸ್ ಮೂರು ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿದ್ದರೆ ಬಿಜೆಪಿ – ಜೆಡಿಎಸ್ ಮೈತ್ರಿ ಕೂಡ ಮೂರು ಕ್ಷೇತ್ರಗಳಲ್ಲೂ ಗೆದ್ದೇ ಗೆಲ್ಲುತ್ತೇವೆ ಎಂದು ಹೇಳುತ್ತಿದೆ. ಆದರೆ, ಮತದಾರನ ಆಶೀರ್ವಾದ ಏನು ಎಂಬುವುದು ಮಾತ್ರ ನ. 23ಕ್ಕೆ ತಿಳಿಯಲಿದೆ.
ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರಗಳಲ್ಲಿ ಈ ಮೊದಲು ಕ್ರಮವಾಗಿ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಶಾಸಕರಿದ್ದರು. ಈಗ ಫಲಿತಾಂಶ ಕೂಡ ಅದೇ ರೀತಿಯಾಗಿ ಬರಬಹುದು ಎಂದು ಗುಪ್ತಚರ ವಿಭಾಗ ವರದಿ ನೀಡಿವೆ ಎನ್ನಲಾಗುತ್ತಿದೆ.