ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿ ಉಳಿದಿದ್ದ ಐವರಿಗೂ ಜಾಮೀನು ಸಿಕ್ಕಿದೆ.
ಸಿಸಿಎಚ್ 57ನೇ ನ್ಯಾಯಾಲಯದ ಪ್ರಕರಣದ ಐವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಹತ್ಯೆ ಪ್ರಕರಣದ ಎ3 ಪವನ್, ಎ4 ರಾಘವೇಂದ್ರ, ಎ5 ನಂದೀಶ್, ಎ9 ಧನು ಹಾಗೂ ಎ10 ವಿನಯ್ ಗೆ ಜಾಮೀನು ಮಂಜೂರಾಗಿದೆ. ಈ ಮೂಲಕ ಪ್ರಕರಣದ ಎಲ್ಲ 17 ಆರೋಪಿಗಳಿಗೂ ಜಾಮೀನು ಭಾಗ್ಯ ಸಿಕ್ಕಂತಾಗಿದೆ.
ಇತ್ತೀಚೆಗಷ್ಟೇ ದರ್ಶನ್, ಪವಿತ್ರಾಗೌಡ ಸೇರಿದಂತೆ ಹಲವರಿಗೆ ಜಾಮೀನು ಸಿಕ್ಕಿತ್ತು. ಈಗ ಮತ್ತೆ ಐವರಿಗೆ ಜಾಮೀನು ಸಿಕ್ಕಿದ್ದು, ಎಲ್ಲರಿಗೂ ಜಾಮೀನು ಸಿಕ್ಕಂತಾಗಿದೆ..