ದಾವಣಗೆರೆ: ಆರ್ ಸಿಬಿ ಕಪ್ ಕಾಲ್ತುಳಿತ ಪ್ರಕರಣವನ್ನು ಸಿಬಿಐಗೆ ಕೊಡಬೇಕು. ಸಿಬಿಐ ತನಿಖೆ ಮಾಡಿದಾಗ ಮಾತ್ರ ಘಟನೆಗೆ ನ್ಯಾಯ ಸಿಗುತ್ತೆ ಎಂದು ದಾವಣಗೆರೆಯಲ್ಲಿ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನಸೌಧ ಡಿಸಿಪಿ ತರಾತುರಿ ಕಾರ್ಯಕ್ರಮ ಮಾಡೋದ ಬೇಡ. ಸಿಬ್ಬಂದಿ ಕಡಿಮೆ ಇದ್ದಾರೆ ಎಂದು ಪತ್ರ ಬರೆದಿದ್ದರು. ಲೋಕೋಪಯೋಗಿ ಇಲಾಖೆ ಕೂಡ ವಿಧಾನಸೌಧ ಮುಂಬಾಗ ಕಾರ್ಯಕ್ರಮ ಬೇಡ ಅಂದಿತ್ತು. ಎರಡು ಇಲಾಖೆಯವರು ಪತ್ರ ಬರೆದರೂ ಕಾರ್ಯಕ್ರಮ ಮಾಡಿದ್ದಾರೆ.
ಹಾಗಾದರೆ 11 ಜನರ ಸಾವಿಗೆ ಕಾರಣ ಯಾರು? RCB ತಂಡದ ಆಟಗಾರರಿಗಿಂತ ಅತಿಥಿಗಳೇ ಹೆಚ್ಚಾಗಿದ್ದರು. ಇದು ಆಟಗಾರರಿಗೆ ಮಾಡಿದ ಅವಮಾನ ಅಂತ ಮಾಜಿ ಸಚಿವ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

















