ಬೆಂಗಳೂರು: ಹೊಸ ವರ್ಷ, ಹಬ್ಬ ಸೇರಿ ಹಲವು ಸಂದರ್ಭಗಳಲ್ಲಿ ರಿಲಯನ್ಸ್ ಜಿಯೋ ಟೆಲಿಕಾಂ ಕಂಪನಿಯು ಗ್ರಾಹಕರಿಗೆ ಹಲವು ಆಫರ್ ನೀಡುತ್ತದೆ. ಈಗ ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಜಿಯೋ ಕಂಪನಿಯು ಗ್ರಾಹಕರಿಗೆ ವಿಶೇಷ ಆಫರ್ ನೀಡಿದೆ. 450 ರೂಪಾಯಿ ರಿಚಾರ್ಜ್ (Reliance Jio Festive Recharge Plan) ಮಾಡಿದರೆ, 36 ದಿನಗಳವರೆಗೆ ಹಲವು ಸೇವೆಗಳನ್ನು ಪಡೆಯಬಹುದಾಗಿದೆ. ಹಾಗಾಗಿ, ಗ್ರಾಹಕರು ರಿಚಾರ್ಜ್ ಮಾಡಿಸಿಕೊಳ್ಳುವ ಮೂಲಕ ಆಫರ್ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ.
ಗ್ರಾಹಕರು 450 ರೂಪಾಯಿ ರಿಚಾರ್ಜ್ ಮಾಡಿದರೆ, 36 ದಿನಗಳವರೆಗೆ ಪ್ರತಿ ದಿನ ಅನ್ ಲಿಮಿಟೆಡ್ ಉಚಿತ ವಾಯ್ಸ್ ಕಾಲ್ ಮಾಡಬಹುದಾಗಿದೆ. ಪ್ರತಿ ದಿನ 100 ಎಸ್ಎಂಎಸ್ ಗಳನ್ನು ಕಳುಹಿಸಬಹುದಾಗಿದೆ. ಹಾಗೆಯೇ, ಪ್ರತಿ ದಿನ 2 ಜಿಬಿ ಇಂಟರ್ ನೆಟ್ ಹಾಗೂ ಉಚಿತ 5 ಜಿ ಸೇವೆಯೂ ಲಭ್ಯವಿದೆ.
ಇದರ ಜತೆಗೆ, ಮನರಂಜನೆ ಬಯಸುವವರಿಗೂ ಜಿಯೋ ಕೊಡುಗೆ ನೀಡಿದೆ. 450 ರೂಪಾಯಿ ರಿಚಾರ್ಜ್ ಮಾಡಿಸಿದರೆ ಗ್ರಾಹಕರು ಮೂರು ತಿಂಗಳು ಉಚಿತವಾಗಿ ಜಿಯೋ ಹಾಟ್ ಸ್ಟಾರ್ ಒಟಿಟಿ ಪ್ಲಾಟ್ ಫಾರ್ಮ್ ಬಳಸಬಹುದಾಗಿದೆ. ಅಲ್ಲದೆ, ಗೂಗಲ್ ಜೆಮಿನಿ ಎಐ ಪ್ರೊ ಪ್ಲಾನ್ ಕೂಡ ಪಡೆಯಬಹುದಾಗಿದೆ. ಇದರಿಂದಾಗಿ ವೃತ್ತಿಪರರು ಉಚಿತವಾಗಿ ಎಐ ಬಳಕೆ ಮಾಡಬಹುದು.
ಫೆಬ್ರವರಿಯಲ್ಲಿ ರಿಲಯನ್ಸ್ ಜಿಯೋ, ಏರ್ ಟೆಲ್ ಸೇರಿ ಹಲವು ಕಂಪನಿಗಳು ರಿಚಾರ್ಜ್ ಪ್ಲಾನ್ ಗಳ ಬೆಲೆಯನ್ನು ಏರಿಕೆ ಮಾಡಲಿವೆ ಎಂದು ಕೂಡ ಹೇಳಲಾಗುತ್ತಿದೆ. ಹಾಗಾಗಿ, ಈಗಲೇ ರಿಚಾರ್ಜ್ ಮಾಡಿಸಿಕೊಳ್ಳುವುದು ಒಳ್ಳೆಯದು ಎಂದು ಹೇಳಲಾಗುತ್ತಿದೆ. ರಿಚಾರ್ಜ್ ಪ್ಲಾನ್ ಗಳ ಬೆಲೆಯಲ್ಲಿ ಶೇ.10ರಿಂದ ಶೇ.20ರಷ್ಟು ಏರಿಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಇಸ್ರೋ ರಾಕೆಟ್ ವೈಫಲ್ಯ | 15 ಉಪಗ್ರಹಗಳು ಭಸ್ಮ, ಕಕ್ಷೆ ಸೇರದಿದ್ದರೂ ಬದುಕುಳಿದ ‘ಒಂದು’ ಪುಟಾಣಿ.. ಏನಿದರ ವಿಶೇಷ?



















