ಮುಂಬಯಿ: ಬೃಹತ್ ಕಂಪನಿಯ ಚುಕ್ಕಾಣಿಯನ್ನು ನೀತಾ ಅಂಬಾನಿ ಅವರು ವಹಿಸಿಕೊಂಡಿದ್ದಾರೆ.
ವಯಾಕಾಂ18 ಮತ್ತು ಡಿಸ್ನಿ ಸ್ಟಾರ್ ಇಂಡಿಯಾ ಸಂಸ್ಥೆಗಳ ವಿಲೀನ ಕಾರ್ಯ ಮುಕ್ತಾಯವಾಗಿದ್ದು, ರಿಲಾಯನ್ಸ್ ಗ್ರೂಪ್ ಗೆ ಸೇರುವ ಈ ಹೊಸ ಕಂಪನಿ 70 ಸಾವಿರ ರೂ. ಕೋಟಿಯಷ್ಟು ಬೃಹತ್ ಗಾತ್ರಿ ಹೊಂದಿವೆ.
ವಯಾಕಾಮ್18 ಮತ್ತು ಡಿಸ್ನಿ ಸ್ಟಾರ್ ಇಂಡಿಯಾ ವಿಲೀನದಿಂದಾಗಿ ಕಂಪನಿಯಲ್ಲಿ ರಿಲಾಯನ್ಸ್ ಷೇರುಪಾಲು ಶೇ. 65.16ರಷ್ಟಿರುತ್ತದೆ. ಉಳಿದ ಶೇ. 36.84ರಷ್ಟು ಪಾಲು ಡಿಸ್ನಿ ಸಂಸ್ಥೆಯ ಬಳಿ ಇರಲಿದೆ. ಎರಡು ಒಟಿಟಿ ಪ್ಲಾಟ್ಫಾರ್ಮ್ಗಳು, 120 ಚಾನಲ್ಗಳು ಹಾಗೂ 75 ಕೋಟಿ ವೀಕ್ಷಕರ ಬಳಗ ಹೊಂದಿರುವ ಹೊಸ ಸಂಸ್ಥೆಯ ವಾರ್ಷಿಕ ಆದಾಯ ಬರೋಬ್ಬರಿ 26 ಸಾವಿರ ಕೋಟಿ ರೂ. ಇರಬಹುದು ಎಂದು ಅಂದಾಜಿಸಲಾಗಿದೆ.
ಹೀಗಾಗಿ ನೀತಾ ಅಂಬಾನಿ ಅವರು ಅಧಿಕೃತವಾಗಿ ಉದ್ಯಮ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಐಪಿಎಲ್ ಫ್ರಾಂಚೈಸಿಯಾಗಿರುವ ಮುಂಬೈ ಇಂಡಿಯನ್ಸ್ ಅನ್ನು ಸಮರ್ಥವಾಗಿ ನಿಭಾಯಿಸಿದ ಅವರು ಈಗ ದೊಡ್ಡ ಮೀಡಿಯಾ ಸಾಮ್ರಾಜ್ಯ ನಿರ್ವಹಿಸಲು ಮುಂದಾಗಿದ್ದಾರೆ.
ನೀತಾ ಅಂಬಾನಿಗೆ ಮೂವರು ಸಿಇಓಗಳು ಸಹಕಾರ ನೀಡುತ್ತಿರುತ್ತಾರೆ. ಎಂಟರ್ಟೈನ್ಮೆಂಟ್ ವಿಭಾಗದ ಸಿಇಒ ಕೆವಿನ್ ವಾಜ್ ಇದ್ದಾರೆ. ಡಿಜಿಟಲ್ ವಿಭಾಗದ ಸಿಇಒ ಕಿರಣ್ ಮಣಿ ಇದ್ದಾರೆ. ಸಂಜೋಗ್ ಗುಪ್ತಾ ಅವರು ಕ್ರೀಡಾ ವಿಭಾಗದ ಸಿಇಒ ಆಗಿದ್ದಾರೆ.