ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ವಲಯದ ಮರವಂತೆ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ವಿಜೃಂಭಣೆಯಿಂದ ನಡೆಯಿತು.
ಮರವಂತೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುಶೀಲಾ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಗುರುರಾಜ್ ಗಂಟೆಹೊಳೆ ಮಾತನಾಡಿ, ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಹೆಚ್ಚಿನ ಒತ್ತನ್ನು ನೀಡುವುದರಿಂದ ಮಾತ್ರ ದೇಶ ಸರ್ವತೋಮುಖವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಮಾಜಿ ಶಾಸಕ ಗೋಪಾಲ್ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಂಕುಚಿತ ಮನೋಭಾವನೆ ಹೋಗಲಾಡಿಸಲು ಶಾಲಾ ವಾರ್ಷಿಕೋತ್ಸವ ಉತ್ತಮವಾದ ವೇದಿಕೆಯಾಗಿದೆ ಎಂದರು.
ವಿದ್ಯಾರ್ಥಿಗಳಿಗಾಗಿ ಕ್ರೀಡಾಕೂಟ ಮತ್ತು ಸಾಂಸ್ಕೃತಿ ಕಾರ್ಯಕ್ರಮ ನಡೆಸಲಾಯಿತು. ಆನಂತರ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ವೇಳೆ ನಿವೃತ್ತ ಶಿಕ್ಷಕರಾದ ಸರ್ವೋತ್ತಮ್ ಭಟ್, ನಾರಾಯಣ ಪೂಜಾರಿ, ಪ್ರದೀಪ್ ಪೂಜಾರಿ ಸಿ.ಎ, ಉಪನ್ಯಾಸಕ ಕಿಶನ್, ಅಡುಗೆ ಸಿಬ್ಬಂದಿ ಪ್ರೇಮಾ ಅವರನ್ನು ಸನ್ಮಾನಿಸಲಾಯಿತು. ಎಸ್ ಡಿಎಂಸಿ ಅಧ್ಯಕ್ಷ ಶ್ಯಾನುಭಾಗ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ತಾಪಂ ಮಾಜಿ ಸದಸ್ಯ ಜಗದೀಶ್ ಪೂಜಾರಿ, ಹಕ್ಕಾಡಿ ಗ್ರಾಪಂ ಸದಸ್ಯ ನಾಗರಾಜ್ ಪಟಗಾರ್, ದಿನೇಶ್ ದೇವಾಡಿಗ, ರಾಜ್ಯ ಸರ್ಕಾರಿ ನೌಕರರ ಸಂಘದ ಬೈಂದೂರು ತಾಲೂಕು ಅಧ್ಯಕ್ಷರು ಶೇಖರ್ ಪೂಜಾರಿ, ರಾಜಶೇಖರ್ ಹೆಬ್ಬಾರ್ ಮರವಂತೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿ ಮಡಿವಾಳ್, ಸುರೇಶ್ ಖಾರ್ವಿ, ಪುಟ್ಟಯ್ಯ ಪೂಜಾರಿ, ಲಕ್ಷ್ಮೀನಾರಾಯಣ ಮಡಿವಾಳ್, ಸಂಗಮ್ ಯುವಕ ಅಧ್ಯಕ್ಷ ಶರತ್, ಯೋಗೀಂದ್ರ ಮರುವಂತೆ, ಪ್ರದೀಪ ಪೂಜಾರಿ ಸೇರಿದಂತೆ ಹಲವರು ಇದ್ದರು.