ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭಾನುವಾರ ರಾತ್ರಿ ಭಾರೀ ಮಳೆ ಸುರಿದಿದ್ದು, ಜನ – ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ. ಹಲವೆಡೆ ದಾಖಲೆಯ ಮಳೆ ಸುರಿದಿದೆ.
ಅಲ್ಲಲ್ಲಿ ಸಾಕಷ್ಟು ಅವಾಂತರಗಳು ನಡೆದಿವೆ. ಈಜಿಪುರದಲ್ಲಿ ಬೈಕ್ ಗಳು ಮುಳುಗಿ ಹೋಗಿವೆ. ಈಜಿಪುರದ ಗ್ರೇಪ್ ಗಾರ್ಡನ್ ಮೊದಲ ಕ್ರಾಸ್ ನಲ್ಲಿ ಬೈಕ್ ಗಳು ಮುಳುಗಿ ಹೋಗಿವೆ. ಹಲವು ಮನೆಗಳಿಗೂ ನೀರು ನುಗ್ಗಿದೆ. ಇಡೀ ರಸ್ತೆ ಸಂಪೂರ್ಣ ಜಲಾವೃತಗೊಂಡಿವೆ.
ಬೆಂಗಳೂರಿನಲ್ಲಿ ದಾಖಲೆಯ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಎಷ್ಟು ಮಳೆ?
ಕೆಂಗೇರಿ : 132mm
ವದೇರಹಳ್ಳಿ : 131mm
ಚಿಕ್ಕಬಾಣಾವರ : 127mm
ಕೊಡತಿ : 125mm
ಸೋಮಶೆಟ್ಟಿಹಳ್ಲಿ : 121mm
ಮಾದನಾಯಕನಹಳ್ಳಿ : 119mm
ಮಾದಾವಾರ : 106mm
ಯಲಹಂಕ : 103mm
ಕೊಡಿಗೆಹಳ್ಳಿ : 100mm ಪ್ರಮಾಣದಲ್ಲಿ ಮಳೆ ಸುರಿದಿದೆ.