ಬೆಂಗಳೂರು: ಭಾರತದಲ್ಲಿ ಅತಿ ಸುರಕ್ಷಿತ ಹೂಡಿಕೆ ಎಂದರೆ ಅದು, ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುವುದು ಹಾಗೂ ಚಿನ್ನವನ್ನು ಖರೀದಿಸುವುದು. ದೇಶದಲ್ಲಿ ಶತಮಾನಗಳಿಂದಲೂ ನಮ್ಮ ಹಿರಿಕರು ಭೂಮಿ, ನಿವೇಶನ ಖರೀದಿ, ಚಿನ್ನ ಖರೀದಿ ಮೂಲಕ ಸುರಕ್ಷಿತವಾದ ಹೂಡಿಕೆ ಮಾಡುತ್ತಿದ್ದರು. ಈಗಲೂ ಅಷ್ಟೇ, ಆಧುನಿಕ ಭಾರತದಲ್ಲೂ ರಿಯಲ್ ಎಸ್ಟೇಟ್ ಹಾಗೂ ಚಿನ್ನದ ಮೇಲಿನ ಹೂಡಿಕೆ ಹಚ್ಚಿದೆ. ಇನ್ನು, ಚಿನ್ನ ಹಾಗೂ ರಿಯಲ್ ಎಸ್ಟೇಟ್ ಹೂಡಿಕೆಯಲ್ಲಿಯೇ ಯಾವುದು ಬೆಸ್ಟ್? ಇಲ್ಲಿದೆ ಮಾಹಿತಿ.
ರಿಯಲ್ ಎಸ್ಟೇಟ್ ಕೂಡ ತುಂಬ ಸುರಕ್ಷಿತ ಹಾಗೂ ಹೆಚ್ಚು ರಿಟರ್ನ್ಸ್ ಕೊಡುವ ಹೂಡಿಕೆಯಾಗಿದೆ. ಕಳೆದ 10-15 ವರ್ಷಗಳಲ್ಲಿ ಬೆಂಗಳೂರು, ಮುಂಬೈ, ನೋಯ್ಡಾ, ಪುಣೆ ಸೇರಿ ಹಲವೆಡೆ ರಿಯಲ್ ಎಸ್ಟೇಟ್ ಬೆಲೆ ಶೇ.92ರಷ್ಟು ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ. ಭಾರತದಲ್ಲಿ ರಿಯಲ್ ಎಸ್ಟೇಟ್ ಸುದೀರ್ಘ ಹೂಡಿಕೆ ಯೋಜನೆಗಳು. ಕಳೆದ 10 ರಿಂ 15 ವರ್ಷದ ಅಂಕಿ-ಅಂಶದ ಪ್ರಕಾರ ಭಾರತದಲ್ಲಿ ರಿಯಲ್ ಎಸ್ಟೇಟ್ ಶೇ.5.2 ರಿಂದ ಶೇ. 6.4ರ ವರೆಗೆ ಲಾಭ ಅಥವಾ ಆದಾಯ ನೀಡಿದೆ ಎಂದು ಪರಿಣತರು ತಿಳಿಸಿದ್ದಾರೆ.
ಇನ್ನು ಇಷ್ಟೇ ಅವಧಿಯಲ್ಲಿ ಚಿನ್ನವು ಹೆಚ್ಚು ರಿಟರ್ನ್ಸ್ ನೀಡಿದೆ. ಕಳೆದ 10-15 ವರ್ಷದಲ್ಲಿ ಚಿನ್ನವು ಶೇ.11ರಿಂದ ಶೇ.14ರಷ್ಟು ರಿಟರ್ನ್ಸ್ ನೀಡಿದೆ. 15 ವರ್ಷದ ಹಿಂದೆ 1 ಲಕ್ಷ ರೂಪಾಯಿ ಚಿನ್ನದ ಮೇಲೆ ಹೂಡಿಕೆ ಮಾಡಿದ್ದರೆ ಇದೀಗ 5 ಲಕ್ಷ ರೂಪಾಯಿ ಆಗುತ್ತಿತ್ತು. ಅದೇ ರಿಯಲ್ ಎಸ್ಟೇಟ್‌ನಲ್ಲಿ 15 ವರ್ಷದ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಇದೀಗ 2.5 ಲಕ್ಷ ರೂಪಾಯಿ ಆಗುತ್ತಿತ್ತು ಎಂಬುದು ಪರಿಣತರು ನೀಡಿದ ಮಾಹಿತಿಯಾಗಿದೆ.
ಹೀಗೆ, ಕಳೆದ 10-15 ವರ್ಷಗಳ ಇತಿಹಾಸವನ್ನು ನೋಡಿದರೆ, ರಿಯಲ್ ಎಸ್ಟೇಟ್ ಗಿಂತ ಚಿನ್ನಕ್ಕೇ ಹೆಚ್ಚಿನ ರಿಟರ್ನ್ಸ್ ಸಿಕ್ಕಿದೆ. ಷೇರು ಮಾರುಕಟ್ಟೆ, ಮ್ಯುಚುವಲ್ ಫಂಡ್ ಗಳ ರಿಸ್ಕ್ ಸಹವಾಸವೇ ಬೇಡ ಎನ್ನುವವರು ರಿಯಲ್ ಎಸ್ಟೇಟ್ ಹಾಗೂ ಚಿನ್ನದ ಮೇಲೆ ಸುರಕ್ಷಿತ ಹೂಡಿಕೆ ಮಾಡಬಹುದಾಗಿದೆ.



















