ಬೆಂಗಳೂರು: ಆರ್‌ಸಿಬಿ ತಂಡವು ಸಿಎಸ್‌ಕೆ ವಿರುದ್ಧ ಸಾಧಿಸಿದ ಗೆಲುವಿನ ಹಿನ್ನೆಲೆಯಲ್ಲಿ, ಆರ್‌ಸಿಬಿ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಸಾಮಾಜಿಕ ಜಾಲತಾಣವಾದ ‘ಎಕ್ಸ್’ ನಲ್ಲಿ ಟ್ವೀಟ್ ಮಾಡಿ ತಂಡವನ್ನು ಅಭಿನಂದಿಸಿದ್ದಾರೆ.

ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ವಿಜಯ ಮಲ್ಯ, ನಮ್ಮ ಆರ್‌ಸಿಬಿ ಸಿಂಹಗಳಿಗೆ ಅಭಿನಂದನೆಗಳು. ನಿಮ್ಮ ಬದ್ಧ ವೈರಿಗಳ ವಿರುದ್ಧ ನೀವು ಬೆಂಗಳೂರಿನ ಸಿಂಹದಂತೆ ಘರ್ಜಿಸಿದ್ದೀರಿ. ಇದೇ ರೀತಿ ಮುಂದುವರಿಸಿ,” ಎಂದು ಶುಭಾಶಯ ತಿಳಿಸಿದ್ದಾರೆ.
ಆರ್‌ಸಿಬಿ ತಂಡದ ಮೇಲೆ ತನ್ನ ಭಾವನಾತ್ಮಕ ನಂಟನ್ನು ಹಲವಾರು ಬಾರಿ ವ್ಯಕ್ತಪಡಿಸಿರುವ ಮಲ್ಯ, ತಂಡ ಮಾರಾಟವಾದ ಸಂದರ್ಭದಲ್ಲೂ ಆರ್‌ಸಿಬಿ ನನ್ನ ಡಿಎನ್‌ಎ ಭಾಗ ಎಂದು ಹೇಳಿದ್ದರು. ಇದಲ್ಲದೆ, ಪ್ರತಿ ಪಂದ್ಯಕ್ಕೂ ಮುನ್ನ ಅವರು ಆರ್‌ಸಿಬಿ ತಂಡಕ್ಕೆ ಆಲ್ ದಿ ಬೆಸ್ಟ್ ಎಂದು ಶುಭ ಹಾರೈಸುತ್ತಾ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಅದ್ಭುತ ಕ್ಯಾಚ್ ಹಿಡಿದು ದುಬೆ ವಿಕೆಟ್ ಪತನಕ್ಕೆ ಕಾರಣರಾದ ಜಿತೇಶ್ ಶರ್ಮಾ.. ವಿಡಿಯೋ ನೋಡಿ!


















