ಬೆಂಗಳೂರು : ನಾಳೆ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಹೈವೋಲ್ಟೇಜ್ IPL ಪಂದ್ಯವನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. ಪಂದ್ಯ ನಡೆಯುವ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಸೇವೆಯನ್ನು ವಿಶೇಷವಾಗಿ ವಿಸ್ತರಿಸಲಾಗಿದೆ. ಸಾಮಾನ್ಯವಾಗಿ ರಾತ್ರಿ 11 ಗಂಟೆಗೆ ಮುಕ್ತಾಯಗೊಳ್ಳುವ ಮೆಟ್ರೋ ಸೇವೆ, ತಡರಾತ್ರಿ 2:00 ಗಂಟೆಯವರೆಗೆ ಲಭ್ಯವಿರಲಿದೆ. ಇದರಿಂದ ಪಂದ್ಯ ವೀಕ್ಷಣೆ ಬಳಿಕ ಮನೆಗೆ ಮರಳಲು ಅಭಿಮಾನಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.

ಐಪಿಎಲ್ ಟಿಕೆಟ್‌ಗಳಲ್ಲೇ ಮೆಟ್ರೋ ಕ್ಯೂಆರ್ ಕೋಡ್ ಮುದ್ರಣ ಮಾಡಲಾಗಿದ್ದು, ಪ್ರಯಾಣ ಸುಲಭಗೊಳಿಸಲಾಗಿದೆ. ಜೊತೆಗೆ ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆಯೂ ಕಲ್ಪಿಸಲಾಗಿದೆ. ಪಂದ್ಯದಂದು ದ್ವಿಚಕ್ರ ವಾಹನಗಳಿಗೆ 30 ರೂ. ಮತ್ತು ಕಾರುಗಳಿಗೆ 60 ರೂ. ನಿಗದಿತ ದರದಲ್ಲಿ ಪಾರ್ಕಿಂಗ್ ಸೌಲಭ್ಯ ಇರಿಸಲಾಗಿದೆ.

ಕೊನೆಯ ರೈಲುಗಳು ಕೆಳಗಿನ ವೇಳಾಪಟ್ಟಿಯಂತೆ
- ವೈಟ್‌ಫೀಲ್ಡ್ (ಕಾಡುಗೋಡಿ) ಯಿಂದ ರಾತ್ರಿ 12.30ಕ್ಕೆ ಮತ್ತು ಚಲ್ಲಘಟ್ಟ ದಿಂದ ರಾತ್ರಿ 12.45ಕ್ಕೆ
- ರೇಷ್ಮೆ ಸಂಸ್ಥೆ ಹಾಗೂ ಮಾದಾವರ ದಿಂದ ರಾತ್ರಿ 12.45ಕ್ಕೆ ಕೊನೆ ರೈಲು ಹೊರಡಲಿದೆ
- ಬೊಮ್ಮಸಂದ್ರ ದಿಂದ ರಾತ್ರಿ 01.00ಕ್ಕೆ ಹಾಗೂ ಆರ್.ವಿ. ರಸ್ತೆ ಯಿಂದ ರಾತ್ರಿ 02.00ಕ್ಕೆ ಹೊರಡಲಿದೆ
- ನಾಡಪ್ರಭು ಕೆಂಪೇಗೌಡ ನಿಲ್ಯಾಣ- ಮಜೆಸ್ಟಿಕ್ ನಿಂದ ನಾಲ್ಕು ದಿಕ್ಕುಗಳಿಗೆ ಮಧ್ಯರಾತ್ರಿ 01:30ಕ್ಕೆ ಕೊನೆಯ ರೈಲು ಹೊರಡಲಿದೆ
ಇದನ್ನೂ ಓದಿ : ಮುಂಬೈ ಇಂಡಿಯನ್ಸ್ 5 ವರ್ಷಗಳ ಟ್ರೋಫಿ ಕೊರತೆ : ವೈಫಲ್ಯದ ಬಗ್ಗೆ ಮೌನ ಮುರಿದ ಮಹೇಲಾ ಜಯವರ್ಧನೆ



















