ಐಪಿಎಲ್ ಮೆಗಾ ಹರಾಜಿಗೆ ವೇದಿಕೆ ಸಿದ್ಧವಾಗಿದ್ದು, ಎಲ್ಲ 10 ಫ್ರಾಂಚೈಸಿಗಳು ತಮಗೆ ಬೇಕಾದವರ ಪಟ್ಟಿ ಸಿದ್ಧ ಮಾಡಿ ಹರಾಜಿಗೆ ಸಿದ್ಧವಾಗಿವೆ.
ಈಗ ಆರ್ ಸಿಬಿ ಫ್ರಾಂಚೈಸಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈಗ ತಂಡದಲ್ಲಿ ಕೇವಲ 3 ಆಟಗಾರರಿದ್ದಾರೆ. ಉಳಿದ ಸ್ಲಾಟ್ ಗಳಿಗೆ ಯಾರ್ಯಾರು ಭರ್ತಿಯಾಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ. ಹೀಗಾಗಿ ಆರ್ ಸಿಬಿ ಕೆಲವರ ಮೇಲೆ ಕಣ್ಣಿಟ್ಟಿದೆ ಎನ್ನಲಾಗಿದೆ.
ಆರ್ಸಿಬಿಯ ಮೊದಲ ಆಯ್ಕೆ ಕನ್ನಡಿಗ ಕೆ.ಎಲ್. ರಾಹುಲ್. ಕನ್ನಡದ ಹುಡುಗನಾಗಿರುವ ರಾಹುಲ್ ಖರೀದಿಗೆ ಆರ್ ಸಿಬಿ ಮುಂದಾಗಬಹುದು. ಅಲ್ಲದೆ ಈ ಹಿಂದೆ ಆರ್ಸಿಬಿ ಪರ ಆಡಿರುವ ರಾಹುಲ್, ಮತ್ತೆ ತಂಡ ಸೇರಿಕೊಳ್ಳುವ ಬಯಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಅಭಿಮಾನಿಗಳು ಕೂಡ ರಾಹುಲ್ ಬೇಕೇ ಬೇಕು ಎಂದು ಮನವಿ ಇಡುತ್ತಿದ್ದಾರೆ. ಹೀಗಾಗಿ ರಾಹುಲ್ ಆಯ್ಕೆ ಮೊದಲ ಪ್ರಾಶಸ್ತ್ಯವಾಗಿದೆ.
ರಾಹುಲ್ ಗಿಂತ ಮುಂಚಿತ ರಿಷಬ್ ಪಂತ್ ಹರಾಜಿಗೆ ಬರುವ ಹಿನ್ನೆಲೆಯಲ್ಲಿ ಆರ್ ಸಿಬಿ ಪಂತ್ ಮೇಲೆ ಕಣ್ಣು ನೆಟ್ಟಿದೆ. ಆರ್ ಸಿಬಿಯ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಕೂಡ ಮತ್ತೆ ಆರ್ ಸಿಬಿಗೆ ಮರಳಿ ಬರುವ ಸಾಧ್ಯತೆ ಇದೆ. ಆರ್ಸಿಬಿ ಬಳಿ ಮೂರು ಆರ್ಟಿಎಮ್ ಕಾರ್ಡ್ ಇರುವ ಕಾರಣ, ಫಾಫ್ ಮೇಲೆ ಆರ್ಸಿಬಿ ಅದನ್ನು ಬಳಸುವ ಸಾಧ್ಯತೆ ಇದೆ.
ಜ್ಯಾಕ್ಸ್ ಕೂಡ ಈ ಮೊದಲ ಆರ್ಸಿಬಿ ಪರ ಆಡಿದ್ದಾರೆ. ಅಲ್ಲದೆ ಅವರು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಶತಕ ಬಾರಿಸುವ ಮೂಲಕ ಎಲ್ಲರನ್ನು ಬೆರಗುಗೊಳಿಸಿದ್ದರು. ಹೀಗಾಗಿ ಜ್ಯಾಕ್ಸ್ ಕೂಡ ಬೇಕು ಎಂದು ಆರ್ ಸಿಬಿ ಚಿಂತಿಸುತ್ತಿದೆ.
ಪಂಜಾಬ್ ಪರ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅರ್ಷದೀಪ್ ಸಿಂಗ್, ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಆಡಿದ್ದ ಆಸೀಸ್ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್, ಯುಜ್ವೇಂದ್ರ ಚಹಾಲ್ ಮೇಲೆ ಆರ್ ಸಿಬಿ ಕಣ್ಣು ನೆಟ್ಟಿದ್ದು, ನಾಳೆಗೆ ಏನಾಗಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.