ಬೆಂಗಳೂರು: ಹೋಮ್ ಲೋನ್, ವಾಹನ ಸಾಲ, ಶಿಕ್ಷಣ ಸಾಲ ಸೇರಿ ಹಲವು ರೀತಿಯ ಸಾಲ ಮಾಡಿದವರಿಗೆ ಆರ್ ಬಿಐ ಸಿಹಿ ಸುದ್ದಿ ನೀಡಿದೆ. ಆರ್ ಬಿಐ (RBI) ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದ ಹಣಕಾಸು ನೀತಿ ಸಮಿತಿ (ಎಂಪಿಸಿ)ಯಲ್ಲಿ ರೆಪೊ ದರ ಇಳಿಕೆ ಮಾಡಲಾಗಿದೆ. ರೆಪೊ ದರದಲ್ಲಿ 25 ಬೇಸಿಸ್ ಪಾಯಿಂಟ್ ಗಳನ್ನು ಇಳಿಕೆ ಮಾಡಲಾಗಿದೆ.
ಇದರೊಂದಿಗೆ ರೆಪೊ ದರವು 5.25 ಕ್ಕೆ ಇಳಿಕೆಯಾಗಿದೆ. ಪ್ರಸಕ್ತ ವರ್ಷದಲ್ಲಿಯೇ ಆರ್ ಬಿಐ ಮೂರು ಬಾರಿ ರೆಪೊ ದರ ಇಳಿಸಿದೆ.
ರೆಪೊ ದರ ಇಳಿಕೆಯ ಲಾಭವನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ವರ್ಗಾಯಿಸಿದರೆ, ಹೋಮ್ ಲೋನ್ ಮತ್ತು ವಾಹನ ಸಾಲ ಸೇರಿದಂತೆ ವಿವಿಧ ಸಾಲಗಳ ಇಎಂಐ ಹೊರೆ ಕಡಿಮೆಯಾಗಲಿದೆ.
ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದ ಹಣಕಾಸು ನೀತಿ ಸಮಿತಿ (ಎಂಪಿಸಿ) ಸರ್ವಾನುಮತದಿಂದ ರೆಪೋ ದರ ಇಳಿಕೆಯ ತೀರ್ಮಾನವನ್ನು ಬುಧವಾರ ಘೋಷಿಸಿದೆ.
ರೆಪೊ ದರ ಇಳಿಕೆಯಾದಾಗ ಬ್ಯಾಂಕ್‌ಗಳಿಗೆ ಸಾಲದ ವೆಚ್ಚ ಕಡಿಮೆ ಆಗುತ್ತದೆ. ಗ್ರಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಅವಕಾಶ ಹೆಚ್ಚುತ್ತದೆ. ಈ ವರ್ಷದ ಆರಂಭದಲ್ಲಿ ಅಧಿಕಾರ ವಹಿಸಿಕೊಂಡ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಎರಡು ಬಾರಿ ರೆಪೋ ದರ ಕಡಿತ ಮಾಡಿದ್ದರು. ಭಾರತದ ಆರ್ಥಿಕತೆಯು ಏಳಿಗೆ ಹೊಂದುತ್ತಿರುವ, ಆದರೆ ರೂಪಾಯಿ ಮೌಲ್ಯ ಕುಸಿಯುತ್ತಿರುವ ಕಾಲಘಟ್ಟದಲ್ಲಿ ಆರ್‌ಬಿಐ ನಿರ್ಣಯವು ಆರ್ಥಿಕ ತಜ್ಞರ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ: ಮನೆ ಬಾಡಿಗೆದಾರರಿಗೆ ಸಿಹಿ ಸುದ್ದಿ : ಇನ್ನು 10 ತಿಂಗಳ ಬದಲು 2 ತಿಂಗಳ ಅಡ್ವಾನ್ಸ್ ಕೊಟ್ಟರೆ ಸಾಕು



















