ಲಕ್ಷ್ಮೀ ಹೆಬ್ಬಾಳ್ಕಾರ್ ರನ್ನು ಬೈದಿದ್ದ ವಿಚಾರ ನಮ್ಮ ರೂಲಿಂಗ್ ಗೆ ಬರುವುದಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ. 19ರಂದು ನಡೆದ ಘಟನೆ ಬಗ್ಗೆ ನಮ್ಮ ಸೆಕ್ರೆಟರಿ ಜೊತೆ ಚರ್ಚೆ ಮಾಡಿದ್ದೇವೆ. ಅಧಿವೇಶನವನ್ನು ಮುಂದೂಡಿದ ನಂತರ ಸಿ.ಟಿ. ರವಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ ಇದು ಸದನದ ವ್ಯಾಪ್ತಿಗೆ ಬರುವುದಿಲ್ಲ. ಒಂದು ವೇಳೆ ಅವರು ಹಕ್ಕು ಚ್ಯುತಿ ಆಗಿದೆ ಎಂದು ದೂರು ನೀಡಿದರೆ ಪರಿಶೀಲನೆ ಮಾಡುತ್ತೇನೆ.
ಹೆಣ್ಣು ಮಗಳನ್ನು ಬೈದಿರುವ ವಿಚಾರ ನಮಗೆ ರೂಲಿಂಗ್ ಗೆ ಬರುವುದಿಲ್ಲ. ಅದು ನಮಗೆ ಸಂಬಂಧ ಇಲ್ಲದ ವಿಚಾರ. ಬೈದರು ಎಂದು ಆ ಹೆಣ್ಣು ಮಗಳು ದೂರು ನೀಡಿದ್ದಾರೆ. ಆದರೆ, ನಮ್ಮ ವ್ಯಾಪ್ತಿಗೆ ಪೊಲೀಸರು ಬರಬಾರದು. ಆದರೆ, ಬಂದಿದ್ದಾರೆ. ಎಲ್ಲ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ. ಇದರಲ್ಲಿ ಪೊಲೀಸರ ತಪ್ಪು ಕೂಡ ಕಂಡು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋವನ್ನು ಎಫ್ ಎಸ್ ಎಲ್ ಗೆ ಕೊಡಬೇಕಿದೆ. ಸದನ ಮುಂದೂಡಿದ್ದಾಗ ಯಾವುದೇ ವೀಡಿಯೋ ದಾಖಲಾಗಿಲ್ಲ. ಯಾರೋ ವೀಡಿಯೋ ಫೇಕ್ ಮಾಡಿದ್ದಾರೆ ಎಂದು ಕೂಡ ಹೊರಟ್ಟಿ ಹೇಳಿದ್ದಾರೆ.
ರವಿ ಬಂಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಎಸ್ಪಿ ಹಾಗೂ ಕಮೀಷನರ್ ಜೊತೆ ಮಾತನಾಡಿದ್ದೇನೆ. ರವಿ ಸೇಫ್ ಆಗಿ ಇದ್ದಾರೆ ಎಂಬುವುದು ಖಚಿತವಾದ ಮೇಲೆಯೇ ನಾನು ಮಲಗಿದ್ದೇನೆ. ಸುಮಾರು ಮೂರ್ನಾಲ್ಕು ಬಾರಿ ರವಿ ಜೊತೆ ಮಾತನಾಡಿದ್ದೇನೆ ಎದಿದ್ದಾರೆ.