ಖ್ಯಾತ ಉದ್ಯಮಿ ರತನ್ ಟಾಟಾ ನಿಧನಕ್ಕೆ ಇಡೀ ದೇಶ ಕಂಬನಿ ಮಿಡಿಯುತ್ತಿದೆ. ಅವರ ನಿಧನದ ಹಿನ್ನೆಲೆಯಲ್ಲಿ ಮಾಜಿ ಪ್ರೇಯಸಿ ಸಿಮಿ ಗರೆವಾಲ್ ಭಾವುಕವಾಗಿ ಪೋಸ್ಟ್ ಮಾಡಿದ್ದಾರೆ.
ರತನ್ ಟಾಟಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ. ರತನ್ ಟಾಟಾ ಅವರ ಹಠಾತ್ ನಿಧನದ ಸುದ್ದಿ ಕೇಳಿ ಇಡೀ ದೇಶ ಕಂಬನಿ ಮಿಡಿಯುತ್ತಿದೆ.
ರತನ್ ಟಾಟಾ ಅವರ ನಿಧನದಿಂದ ಬಾಲಿವುಡ್ ಹಿರಿಯ ನಟಿ ಸಿಮಿ ಗರೆವಾಲ್ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಸಿಮಿ ಅವರು ರತನ್ ಟಾಟಾ ಅವರ ನಿಧನದ ಕುರಿತು ಪೋಸ್ಟ್ ಮಾಡಿ ಭಾವುಕರಾಗಿದ್ದಾರೆ.
ಫೋಟೊವೊಂದನ್ನು ಅವರು ಹಂಚಿಕೊಂಡಿದ್ದು, ನೀವು ಹೋಗಿದ್ದೀರೆಂದು ಎಲ್ಲರೂ ಹೇಳುತ್ತಿದ್ದಾರೆ. ನೀವು ನಮ್ಮ ಜತೆ ಇಲ್ಲ ಎನ್ನುವ ಸತ್ಯವನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟ. ಹೋಗಿಬನ್ನಿ ನನ್ನ ಸ್ನೇಹಿತ ಎಂದು ಬರೆದಿದ್ದಾರೆ. ರತನ್ ಟಾಟಾ ಅವರೊಂದಿಗಿನ ಸಂಬಂಧದ ಕುರಿತು 2011 ರಲ್ಲಿ ನೀಡಿದ ಸಂದರ್ಶನದಲ್ಲಿ ಹಿಂದಿ ಸಿನಿಮಾ ನಟಿ ಸಿಮಿ ಸ್ವತಃ ಬಹಿರಂಗಪಡಿಸಿದ್ದರು.
ಸಿಮಿ ಅವರು ಪರಿಪೂರ್ಣ ವ್ಯಕ್ತಿ, ಹಾಸ್ಯ ಪ್ರಜ್ಞೆ ಕೂಡ ಚೆನ್ನಾಗಿತ್ತು. ಸಭ್ಯರು. ಎಂದೂ ಶ್ರೀಮಂತಿಕೆ ತೋರ್ಪಡಿಸಿರಲಿಲ್ಲ ಎಂದು ಹೇಳಿದ್ದರು. ಇ ರತನ್ ಹಾಗೂ ಸಿಮಿಯ ಪ್ರೀತಿ ಹೆಚ್ಚು ದಿನ ಉಳಿಯಲಿಲ್ಲ, ಸಿಮಿ ಬೇರೊಬ್ಬರನ್ನು ಮದುವೆಯಾದರು. ಸಾಕಷ್ಟು ವರ್ಷಗಳ ಕಾಲ ಸಿಮಿ ಹಾಗೂ ರತನ್ ಉತ್ತಮ ಸ್ನೇಹಿತರಾಗಿದ್ದರು. 1960 ರ ದಶಕದಲ್ಲಿ ಅಮೆರಿಕದಲ್ಲಿ ಕೆಲಸ ಮಾಡುವಾಗ ರತನ್ ಟಾಟಾ ಬೇರೊಬ್ಬ ಹುಡುಗಿಯನ್ನು ಇಷ್ಟಪಟ್ಟಿದ್ದರು. ಆದರೆ, ಅದು ಕೂಡ ಮದುವೆಯ ಹಂತಕ್ಕೆ ಬರಲಿಲ್ಲ.