ದಾವಣಗೆರೆ : ರಶ್ಮಿಕಾ ಮಂದಣ್ಣ ಮದುವೆ ಆಹ್ವಾನ ಪತ್ರಿಕೆ ಬಂದಿಲ್ಲ, ಬಂದ್ರೆ ಹೋಗುತ್ತೇನೆ. ಆಹ್ವಾನ ಪತ್ರಿಕೆ ಕೊಡೋದಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವೇ.. ಇದರ ಬಗ್ಗೆ ರಕ್ಷಿತ ಶೆಟ್ಟಿ ಕೂಡ ಪ್ರತಿಕ್ರಿಯೆ ಕೊಟ್ಟಿದ್ದಾರೆ ಎಂದು ನಟ ಪ್ರಮೋದ್ ಶೆಟ್ಟಿ ಹೇಳಿದ್ದಾರೆ.
ದಾವಣಗೆರೆಯಲ್ಲಿ ಪ್ರಮೋದ್ ಶೆಟ್ಟಿ ರಶ್ಮಿಕಾ ಮಂದಣ್ಣ ಮದುವೆ ವಿಚಾರವಾಗಿ ವರದಿಗಾರರೊಂದಿಗೆ ಮಾತನಾಡುತ್ತಾ, ನೋಡ್ತಾ ಇರಿ.. ರಕ್ಷಿತ್ ಶೆಟ್ರು ಫಿನಿಕ್ಸ್ ತರ ಎದ್ದು ಬರ್ತಾನೆ, ನೋಡಿ ಸ್ವಲ್ಪ ಸಮಯ ಕಳೆದು ಹೋಗ್ತಾನೆ, ಆರಾಮಾಗಿ ಸಿನಿಮಾ ಮಾಡ್ತಾನೆ. ನಮ್ ತರ ಅರ್ಜೆಂಟ್ ಇಲ್ಲ ಅವ್ನಿಗೆ, ರಕ್ಷಿತ್ ಶೆಟ್ಟಿಗೆ ಯಾವುದೇ ಗಿಲ್ಟಿ ಫೀಲಿಂಗ್ ಕೂಡ ಇಲ್ಲ ಎಂದಿದ್ದಾರೆ.
ಗಿಲ್ಟಿ ಫೀಲಿಂಗ್‌ನಲ್ಲಿ ಕೊರಗಿಕೊಂಡು ಕೂರೋದಕ್ಕೆ ಚಿಕ್ಕ ಮಕ್ಕಳ ಹೇಳಿ. ಅದು ಯಾವುದೋ ಕಾಲಕ್ಕೆ ಮುಗಿದು ಹೋದ ಅಧ್ಯಾಯ ಇದಕ್ಕೆಲ್ಲ ತಲೆಕೆಡಸಿಕೊಳ್ಳೊಕೆ ಆಗುತ್ತಾ ಎಂದು ರಶ್ಮಿಕಾಗೆ ಪ್ರಮೋದ್ ಶೆಟ್ಟಿ ಟಕ್ಕರ್ ಕೊಟ್ಟಿದ್ದಾರೆ.
ಇದನ್ನೂ ಓದಿ : ‘ರಾಜನಿವಾಸ’ ಹೋಲಿಕೆ ನಿಜನಾ..?



















