ಬೆಂಗಳೂರು: ರನ್ಯಾರಾವ್ (Ranya Rao) ಗೋಲ್ಡ್ ಸ್ಮಗ್ಲಿಂಗ್ (Gold Smuggling Case) ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಾಮೀನು ಅರ್ಜಿ ವಿಚಾರಣೆ ಆದೇಶ ಹೊರ ಬೀಳಲಿದೆ.
ರನ್ಯಾ ರಾವ್ ಬರೋಬ್ಬರಿ 12 ಕೋಟಿ ರೂ. ಮೌಲ್ಯದ 14 ಕೆಜಿ ಮೌಲ್ಯದ ಚಿನ್ನದ ಗಟ್ಟಿಗಳನ್ನು ದುಬೈನಿಂದ ಬೆಂಗಳೂರಿಗೆ (Bengaluru) ತಂದಿದ್ದರು. ಬಂಧನಕ್ಕೆ ಒಳಗಾಗಿದ್ದ ರನ್ಯಾ ರಾವ್‌ಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಶಾಕ್ ನೀಡಿತ್ತು.
ಜಾಮೀನು ಕೋರಿ ಸೆಷನ್ಸ್ ಕೋರ್ಟ್ ಅಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ವೇಳೆ ಚಿನ್ನ ಕಳ್ಳ ಸಾಗಾಣೆ ಮಾಡುವುದಕ್ಕೆ ಹವಾಲಾ ದುಡ್ಡು ಬಳಕೆಯಾಗಿರುವ ಕುರಿತು ಕೂಡ ತನಿಖೆಯಿಂದ ತಿಳಿದು ಬಂದಿತ್ತು. ಸುದೀರ್ಘ ವಾದ – ಪ್ರತಿವಾದ ಆಲಿಸಿದ ನ್ಯಾಯಾಲಯ ಆದೇಶ ಕಾಯ್ದಿರಿಸಿತ್ತು. ಇಂದು ಆದೇಶ ಹೊರಬೀಳಲಿದೆ.