ಭಾರತದ ನಾಟಕ ಕಲೆಯ ಪ್ರೋತ್ಸಾಹಕ್ಕಾಗಿ ಆಯೋಜಿಸಿದ ವಿಶೇಷ ಕಾರ್ಯಕ್ರಮ
ನವದೆಹಲಿ: ಇಲ್ಲಿನ ಕಮಾನಿ ಆಡಿಟೋರಿಯಂನಲ್ಲಿ 20ನೇ ಆವೃತ್ತಿಯ ಮಹೀಂದ್ರ ಎಕ್ಸಲೆನ್ಸ್ ಇನ್ ಥಿಯೇಟರ್ ಅವಾರ್ಡ್ಸ್ (META) ಸಮಾರಂಭವು ನಡೆಯಿತು. ಈ ವೇಳೆ ನಾಟಕಗಳು ಪ್ರದರ್ಶನಗೊಂಡು ಅತ್ಯುತ್ತಮ ನಾಟಕಗಳಿಗೆ ಹಲವು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಯಿತು. ಮಹೀಂದ್ರ ಗ್ರೂಪ್‌ನಿಂದ ಸ್ಥಾಪನೆಗೊಂಡಿರುವ ಮತ್ತು ಟೀಮ್‌ವರ್ಕ್ ಆರ್ಟ್ಸ್‌ನಿಂದ ಆಯೋಜಿಸಲಾಗಿದ್ದ ಈ ಉತ್ಸವಲ್ಲಿ ರಂಗಭೂಮಿ ಕಲೆಯುನ್ನು ಗೌರವಿಸಲಾಯಿತು.
ಈ ಉತ್ಸವದಲ್ಲಿ ದೇಶದ ಹಲವಾರು ಅತ್ಯುತ್ತಮ ನಾಟಕಗಳು ಪ್ರದರ್ಶಿಸಲ್ಪಟ್ಟವು, ಇದರಲ್ಲಿ ಬಂಗಾಳಿ, ಹಿಂದಿ, ಮಲಯಾಳಂ, ಕನ್ನಡ ಸೇರಿದಂತೆ ಹಲವು ಭಾಷೆಗಳ ನಾಟಕಗಳು ಸೇರಿದ್ದವು. ಕಮಾನಿ ಆಡಿಟೋರಿಯಂ ಮತ್ತು ಶ್ರೀ ರಾಮ್ ಸೆಂಟರ್‌ನಲ್ಲಿ ನಡೆದ ಸಮಾರಂಭದಲ್ಲಿ 13 ಸ್ಪರ್ಧಾತ್ಮಕ ವಿಭಾಗಗಳಲ್ಲಿ ಪ್ರಶಸ್ತಿ ವಿಜೇತರನ್ನು ಪ್ರಕಟಿಸಲಾಯಿತು.

ನಿಹ್ಸಂಗೋ ಈಶ್ವರ್ ನಾಟಕವು ಅತ್ಯುತ್ತಮ ನಿರ್ಮಾಣ, ಅತ್ಯುತ್ತಮ ಮೂಲ ಸ್ಕ್ರಿಪ್ಟ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿತು. ಸ್ವಾಂಗ್: ಜಸ್ ಕಿ ಟಾಸ್ ನಾಟಕದ ‘ಅಕ್ಷಯ್ ಸಿಂಗ್ ಠಾಕೂರ್ ‘ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರೆ, , ಚಂದಾ ಬೇಡ್ನಿ ಮತ್ತು ನಿಹ್ಸಂಗೋ ಈಶ್ವರ್ ನಾಟಕಗಳಲ್ಲಿ ಅಭಿನಯಿಸಿದ ರಂಜನಿ ಘೋಷ್ ಮತ್ತು ಸುಮನ್ ಸಾಹಾ ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿ ಗೆದ್ದರು.
ಈ ವರ್ಷದ ಮೆಟಾ ಉತ್ಸವಕ್ಕೆ 367ಕ್ಕೂ ಹೆಚ್ಚು ನಾಟಕಗಳು ನೋಂದಾಯಿಸಿಕೊಂಡಿದ್ದವು. ಬಂಗಾಳಿ, ಇಂಗ್ಲಿಷ್, ಹಿಂದಿ, ಬುಂದೇಲಿ, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಹಲವು ಭಾಷೆಗಳ ನಾಟಕಗಳು ಪ್ರದರ್ಶನಗೊಂಡವರು. ಲಿಲ್ಲೆಟ್ ದುಬೆ, ದಾದಿ ಡಿ. ಪುಡುಂಜೆ, ಸುಧೀರ್ ಮಿಶ್ರಾ, ಬ್ರೂಸ್ ಗುತ್ರಿ ಮತ್ತು ಸುನಿತ್ ತಂಡನ್ ಅವರಂತಹ ನಾಟಕ ಕ್ಷೇತ್ರದ ದಿಗ್ಗಜರು ಆಯ್ಕೆ ಸಮಿತಿಯಲ್ಲಿಇದ್ದರು.
ಜೀವಮಾನ ಸಾಧನೆ ಪ್ರಶಸ್ತಿಯನ್ನು ಶಾಂತಾ ಗೋಖಲೆ ಅವರಿಗೆ ಪ್ರದಾನ ಮಾಡಲಾಯಿತು. ಇವರು ಭಾರತೀಯ ನಾಟಕ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಯಿತು. ‘ಜೀವಂತಯ್ ಮಾಲಾ’ ನಾಟಕದಲ್ಲಿ ಅಭಿನಯಿಸಿದ ಸಾಕ್ಷಿತಾ ಸಂತೋಷ್ ವಿಶೇಷ ಜ್ಯೂರಿ ಮೆನ್ಷನ್ ಪ್ರಶಸ್ತಿ ದೊರಕಿತು.

ಮಹೀಂದ್ರ ಮತ್ತು ಮಹೀಂದ್ರ ಲಿಮಿಟೆಡ್‌ನ ಕಲ್ಚರಲ್ ಔಟ್ರೀಚ್ ವಿಭಾಗದ ಉಪಾಧ್ಯಕ್ಷ ಜಯ್ ಶಾ ಮಾತನಾಡಿ, “ಮಹೀಂದ್ರ ಎಕ್ಸಲೆನ್ಸ್ ಇನ್ ಥಿಯೇಟರ್ ಅವಾರ್ಡ್ಸ್ ಭಾರತದ ನಾಟಕ ಪರಂಪರೆಯನ್ನು ಸಂರಕ್ಷಿಸಲು ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಅದ್ಭುತ ಪ್ರತಿಭೆಗಳನ್ನು ಗೌರವಿಸಲು ನಾವು ಸಂತೋಷಪಡುತ್ತೇವೆ” ಎಂದು ಹೇಳಿದರು.
ಟೀಮ್‌ವರ್ಕ್ ಆರ್ಟ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಸಂಜೋಯ್ ಕೆ. ರಾಯ್ ಮಾತನಾಡಿ, “ಈ ವರ್ಷದ ಪ್ರಶಸ್ತಿ ವಿಜೇತರು ಭಾರತೀಯ ನಾಟಕದ ನವೀನ ಮನೋಭಾವ ಮತ್ತು ಕಲಾತ್ಮಕ ಶ್ರೇಷ್ಠತೆ ಪ್ರತಿಬಿಂಬಿಸಿದ್ದಾರೆ,” ಎಂದು ನುಡಿದರು. ಈ ಪ್ರಶಸ್ತಿ ಸಮಾರಂಭದಲ್ಲಿ ಎನ್ಡಿಎಂಸಿ ಚೇರ್ಮನ್ ಕೇಶವ್ ಚಂದ್ರ, ನಟ ಕಬೀರ್ ಬೇಡಿ ಮತ್ತು ರಜತ್ ಕಪೂರ್ ಅವರಂತಹ ಗಣ್ಯರು ಉಪಸ್ಥಿತರಿದ್ದರು.
13 ಸ್ಪರ್ಧಾತ್ಮಕ ವರ್ಗಗಳಲ್ಲಿ ಪ್ರಶಸ್ತಿಗಳು
- ಅತ್ಯುತ್ತಮ ನಿರ್ಮಾಣ– ನಿಹ್ಸಂಗೋ ಈಶ್ವರ್ (ಬಂಗಾಳಿ, ಸಂಸ್ಕೃತ)
- ಅತ್ಯುತ್ತಮ ನಿರ್ದೇಶಕ – ಅಕ್ಷಯ್ ಸಿಂಗ್ ಠಾಕೂರ್, ಸ್ವಾಂಗ್: ಜಸ್ ಕಿ ಟಾಸ್ (ಹಿಂದಿ, ಬುಂದೇಲಿ)
- ಅತ್ಯುತ್ತಮ ಸ್ಟೇಜ್ ಡಿಸೈನ್ – ಸುಮನ್ ಸಾಹಾ, ನಿಹ್ಸಂಗೋ ಈಶ್ವರ್ (ಬಂಗಾಳಿ, ಸಂಸ್ಕೃತ)
- ಅತ್ಯುತ್ತಮ ಲೈಟ್ ಡಿಸೈನ್ – ಬಾದಲ್ ದಾಸ್, ಚಂದಾ ಬೇಡ್ನಿ (ಹಿಂದಿ)
- ಅತ್ಯುತ್ತಮ ಸೌಂಡ್ ಮತ್ತು ಮ್ಯೂಸಿಕ್ ಡಿಸೈನ್ – ಅಕ್ಷಯ್ ಸಿಂಗ್ ಠಾಕೂರ್, ಸ್ವಾಂಗ್: ಜಸ್ ಕಿ ಟಾಸ್ (ಹಿಂದಿ, ಬುಂಡೇಲಿ)
- ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನ್ – ರಾಜೇಶ್ವರಿ ಕೊಡಗು, ದಶಾನನ ಸ್ವಪ್ನಸಿದ್ಧಿ (ಕನ್ನಡ)
- ಅತ್ಯುತ್ತಮ ನಟ (ಪುರುಷ) – ಸುಮನ್ ಸಾಹಾ, ನಿಹ್ಸಂಗೋ ಈಶ್ವರ್ (ಬಂಗಾಳಿ, ಸಂಸ್ಕೃತ)
- ಅತ್ಯುತ್ತಮ ನಟಿ (ಮಹಿಳೆ)– ರಂಜನಿ ಘೋಷ್, ಚಂದಾ ಬೇಡ್ನಿ (ಹಿಂದಿ)
- ಅತ್ಯುತ್ತಮ ಸಹನಟ (ಪುರುಷ) – ಅಭಿಷೇಕ್ ಗೌತಮ್, ಸ್ವಾಂಗ್: ಜಸ್ ಕಿ ಟಾಸ್ (ಹಿಂದಿ, ಬುಂದೇಲಿ)
- ಅತ್ಯುತ್ತಮ ಸಹನಟಿ (ಮಹಿಳೆ)– ಚಂದ್ರಾಣಿ ಸರ್ಕಾರ್, ನಿಹ್ಸಂಗೋ ಈಶ್ವರ್ (ಬಂಗಾಳಿ, ಸಂಸ್ಕೃತ)
- ಅತ್ಯುತ್ತಮ ಮೂಲ ಸ್ಕ್ರಿಪ್ಟ್ – ಸುಮನ್ ಸಾಹಾ ಮತ್ತು ಸೋಹಮ್ ಗುಪ್ತಾ, ನಿಹ್ಸಂಗೋ ಈಶ್ವರ್ (ಬಂಗಾಳಿ, ಸಂಸ್ಕೃತ)
- ಅತ್ಯುತ್ತಮ ಎನ್ಸೆಂಬಲ್ – ಸ್ವಾಂಗ್: ಜಸ್ ಕಿ ಟಾಸ್, ಚಂದಾ ಬೇಡ್ನಿ (ಹಿಂದಿ)
- ಅತ್ಯುತ್ತಮ ಕೊರಿಯೋಗ್ರಫಿ – ಸುಭೋಜಿತ್ ಗುಹಾ ಮತ್ತು ಮಧುಮಿತಾ ಚಕ್ರವರ್ತಿ, ಚಂದಾ ಬೇಡ್ನಿ (ಹಿಂದಿ