ಕೆಜಿಎಫ್ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ರಾಕಿಂಗ್ ಸ್ಟಾರ್ ಯಶ್, ಇದೀಗ ಮತ್ತೊಂದು ಬಿಗ್ ಬಜೆಟ್ ಸಿನಿಮಾ ರಾಮಾಯಣ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಈ ಸಿನಿಮಾದ ಮೊದಲ ಗ್ಲಿಂಪ್ಸ್ ಬಿಡುಗಡೆಯಾಗಿದ್ದು, ಯಶ್ ರಾವಣನ ಪಾತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಆದರೆ, ಇದೇ ಚಿತ್ರದಲ್ಲಿ ನಟಿಸುತ್ತಿರುವ ಬಾಲಿವುಡ್ ಆಕ್ಟರ್ ರಣಬೀರ್ ಕಪೂರ್ ರಾಮನ ಪಾತ್ರಕ್ಕೆ ಟೀಕೆಗಳು ವ್ಯಕ್ತವಾಗುತ್ತಿವೆ. ರಾಮಾಯಣ ಸಿನಿಮಾದ ಗ್ಲಿಂಪ್ಸ್ ಹೊರ ಬಂದ ಹೊತ್ತಲ್ಲೇ ರಣಬೀರ್ ಕಪೂರ್ ಹಳೆಯ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ಇದರಿಂದಾಗಿ ರಣಬೀರ್ ರಾಮನ ಪಾತ್ರಕ್ಕೆ ಸೂಟ್ ಆಗಿಲ್ಲ ಸ್ಯೂಟ್ ಆಗಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಆಗಿದ್ರೆ ಆ ವಿಡಿಯೋದಲ್ಲಿ ಏನಿದೆ ಎಂದು ನೋಡುವುದಾದರೆ.
ನಟ ರಣಬೀರ್ ಕಪೂರ್ ಅವರು ತಾನು ಗೋಮಾಂಸ ಪ್ರಿಯ ಗೋಮಾಂಸ ತಿನ್ನುವುದಾಗಿ ಒಪ್ಪಿಕೊಂಡಿದ್ದರು. ಈ ಮೊದಲು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಣಬೀರ್ ಕಪೂರ್ ಈ ಬಗ್ಗೆ ಮಾತನಾಡಿದ್ದರು. ತಮಗೆ ಗೋಮಾಂಸ ಇಷ್ಟ ಎಂದು ಅವರು ಹೇಳಿದ್ದರು. ಆ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ. ಅದನ್ನು ಇಟ್ಟುಕೊಂಡು ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿಂತೆ ಪರ-ವಿರೋಧದದ ಚರ್ಚೆ ಶುರುವಾಗಿದೆ. ಗೋಮಾಂಸ ತಿನ್ನುವ ನಟನಿಂದ ರಾಮನ ಪಾತ್ರ ಮಾಡಿಸುವುದು ಎಷ್ಟು ಸರಿ? ಬಾಲಿವುಡ್ ಮಂದಿಗೆ ಏನಾಗಿದೆ ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ರಣಬೀರ್ ಕಪೂರ್ ಅವರು ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಚಿತ್ರತಂಡದವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.